alex Certify ವೆಜ್​ ಬಿರಿಯಾನಿ ಪ್ರಿಯರ ತಲೆಗೆ ಹುಳಬಿಟ್ಟ ಜೊಮ್ಯಾಟೋ ಕಂಪೆನಿ: ಟ್ವೀಟ್​ಗೆ ಸುಸ್ತಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಜ್​ ಬಿರಿಯಾನಿ ಪ್ರಿಯರ ತಲೆಗೆ ಹುಳಬಿಟ್ಟ ಜೊಮ್ಯಾಟೋ ಕಂಪೆನಿ: ಟ್ವೀಟ್​ಗೆ ಸುಸ್ತಾದ ನೆಟ್ಟಿಗರು

ವಿಶ್ವದಲ್ಲಿ ಏನೇ ಸಂಭವಿಸಿದರೂ ಮೊದಲು ಜಾಲತಾಣದಲ್ಲಿ ಇವುಗಳ ಬಗ್ಗೆ ವೈರಲ್​ ಆಗುತ್ತವೆ. ಹಾಗೆಯೇ ಇದೇ 15ರಂದು ಜಗತ್ತಿನ ಜನಸಂಖ್ಯೆ 8 ಶತಕೋಟಿ ದಾಟಿದ್ದು, ಆ ಬಗ್ಗೆ ಥಹರೇವಾರಿ ಮೀಮ್ಸ್​ಗಳು ಇದಾಗಲೇ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಅವುಗಳ ನಡುವೆ ಜೊಮ್ಯಾಟೋ ಕೂಡ ಒಂದು ಮೆಸೇಜ್​ ಶೇರ್​ ಮಾಡಿದ್ದು, ಇದರ ಬಗ್ಗೆ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಜಾಗತಿಕ ಜನಸಂಖ್ಯೆ 8 ಬಿಲಿಯನ್​ ತಲುಪಿದೆ. ಆದರೆ ವೆಜ್​ ಬಿರಿಯಾನಿ ಪ್ರಿಯರು ಮಾತ್ರ ಜೀರೋ ಮಂದಿ ಇದ್ದಾರೆ ಎಂದು ಅದು ಬರೆದುಕೊಂಡಿದೆ.

ಇದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ತಾವು ವೆಜ್​ ಬಿರಿಯಾನಿ ಪ್ರಿಯರು, ಸಾಕಷ್ಟು ಬಾರಿ ಜೊಮ್ಯಾಟೊದಿಂದಲೇ ಇದನ್ನು ತರಿಸಿಕೊಂಡಿದ್ದೇವೆ, ಆದರೆ ಕಂಪನಿ ಏಕೆ ಹೀಗೆ ಬರೆದಿದೆ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ವೆಜ್​ ಬಿರಿಯಾನಿ ಇಲ್ಲದಿದ್ದರೆ ತಾವು ವೆಜ್​ ಹೆಸರಲ್ಲಿ ನಾನ್​ವೆಜ್​ ತಿನ್ನುತ್ತಿದ್ದೇವೆಯೇ ಎಂದು ಹಲವರು ಪ್ರಶ್ನಿಸಿದರೆ, ಅಸಲಿಗೆ ವೆಜ್​ ಬಿರಿಯಾನಿ ಎನ್ನುವುದು ಇಲ್ಲವೇ ಇಲ್ಲ. ಅದು ವೆಜ್​ ಪುಲಾವ್​ ಅಷ್ಟೇ. ಅದಕ್ಕೆ ಬಿರಿಯಾನಿ ಎನ್ನುವುದು ತಪ್ಪು. ಬಿರಿಯಾನಿ ಎಂದರೆ ಅದು ಚಿಕನ್​, ಮಟನ್​ ಹೀಗೆ ನಾನ್​ವೆಜ್ಜಿಗಷ್ಟೇ ಹೇಳುವುದು ಎಂದು ಹಲವರು ಕಮೆಂಟ್​ನಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ಜೊಮ್ಯಾಟೋದ ಈ ಟ್ವೀಟ್​ ವೆಜ್​ ಬಿರಿಯಾನಿ ಪ್ರಿಯರ ತಲೆ ಕೆಡಿಸಿದೆ.

https://twitter.com/namanchopraaa/status/1592477818071715841?ref_src=twsrc%5Etfw%7Ctwcamp%5Etweetembed%7Ctwterm%5E1592477818071715841%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fzomato-has-a-message-for-veg-biryani-lovers-as-worlds-population-hits-8-billion-see-post-2297899-2022-11-16

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...