
ಇದೇ ಕಾರಣಕ್ಕೆ ಆಹಾರ ವಿತರಣಾ ಅಪ್ಲಿಕೇಶನ್‌ಗಳಲ್ಲಿ ಭರ್ಜರಿ ಆರ್ಡರ್‌ಗಳು ಬಂದಿವೆ. ಈ ಕುರಿತು ಝೊಮಾಟೊ ಸಿಇಒ ದೀಪಿಂದರ್ ಗೋಯಲ್ ಹಲವಾರು ಟ್ವೀಟ್‌ಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ತಾವು ಒಂದು ದಿನದ ಡೆಲಿವರಿ ಏಜೆಂಟ್‌ನ ಪಾತ್ರವನ್ನು ವಹಿಸಿಕೊಂಡಿದ್ದುದಾಗಿ ಅವರು ಹೇಳಿದ್ದಾರೆ.
ಗೋಯಲ್ ಅವರು ಝೊಮಾಟೊ ಪ್ರಧಾನ ಕಚೇರಿಯಲ್ಲಿ ಆದೇಶವನ್ನು ಸ್ವೀಕರಿಸುತ್ತಿರುವ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. “ನನ್ನ ಮೊದಲ ಡೆಲಿವರಿ ನನ್ನನ್ನು ಝೊಮಾಟೊ ಆಫೀಸ್‌ಗೆ ಕರೆತಂದಿತು ಎಂದು ಅವರು ಬರೆದುಕೊಂಡಿದ್ದಾರೆ. ಈ ಎಲ್ಲಾ ಟ್ವೀಟ್‌ಗಳಲ್ಲಿ ಗ್ರಾಹಕರಿಗೆ ಆಹಾರವನ್ನು ತಲುಪಿಸುವ ಅನುಭವವನ್ನು ಗೋಯಲ್ ಹಂಚಿಕೊಂಡಿದ್ದಾರೆ.
“ಇದೊಂದು ಮೋಜಿನ ಸಂಗತಿ: ಇಂದು ವಿತರಿಸಲಾದ ಆರ್ಡರ್‌ಗಳು ಎಷ್ಟಿತ್ತು ಎಂದರೆ, ನಮ್ಮ ಆಹಾರ ವಿತರಣಾ ಸೇವೆಯ ಮೊದಲ 3 ವರ್ಷಗಳಲ್ಲಿ ವಿತರಿಸಲಾದ ಎಲ್ಲಾ ಆರ್ಡರ್‌ಗಳನ್ನು ಸೇರಿಸಿದರೆ ಎಷ್ಟು ಇತ್ತೋ ಅಷ್ಟು” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ.