
ಹೌದು, ತಮಿಳುನಾಡಿನ ತೆಂಕಸಿ ಸಮೀಪದ ಮತ್ತಾಲಂಪರೈ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಶ್ರೀಧರ್, ತಾವು ನೋಡಿದ ಕಾಳಿಂಗ ಸರ್ಪದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಹಾವನ್ನು ಭೇಟಿ ಮಾಡಿದ ದಿನವನ್ನು ಅತ್ಯಂತ ಮಂಗಳಕರವಾದ ದಿನವೆಂದು ಹೇಳಿದ್ದಾರೆ.
‘ನಮ್ಮ ಮನೆಯ ಬಳಿ 12 ಅಡಿ ಉದ್ದದ, ಕಪ್ಪಾದ ಕಾಳಿಂಗ ಸರ್ಪ ಬಂದಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. ಕಾಳಿಂಗ ಸರ್ಪದ ಫೋಟೋ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿದುಕೊಂಡಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. “ಅಪರೂಪದ 12 ಅಡಿ ಉದ್ದದ ಕಾಳಿಂಗ ಸರ್ಪ ಇಂದು ನಮ್ಮನ್ನು ಭೇಟಿಯಾಗಿತ್ತು. ಬಳಿಕ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಹಿಡಿದಿದ್ದು, ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ನಾನೂ ಧೈರ್ಯದಿಂದ ಅದನ್ನು ಮುಟ್ಟಿದ್ದೇನೆ. ನಿಜಕ್ಕೂ ಹಾವು ಬಂದ ದಿನ ಮಂಗಳಕರ ದಿನ” ಎಂದು ಹೇಳಿದ್ದಾರೆ.
— Sridhar Vembu (@svembu) September 21, 2021