
ಚೆನ್ನೈ ಸೂಪರ್ ಕಿಂಗ್ಸ್ , ದೆಹಲಿ ಕ್ಯಾಪಿಚಲ್ಸ್ ತಂಡವನ್ನು ಸೋಲಿಸಿದ ನಂತರ ಧೋನಿ ಮತ್ತು ಝಿವಾ ನಡುವಿನ ಮತ್ತೊಂದು ಆರಾಧ್ಯ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪಂದ್ಯದ ನಂತರದ ಪ್ರದಾನ ಸಮಾರಂಭ ನಡೆಯುತ್ತಿದ್ದಾಗ ಮಾತನಾಡಲು ಕಾಯುತ್ತಿದ್ದ ಧೋನಿಯತ್ತ ಓಡಿ ಬಂದ ಝಿವಾ ಅವರಿಗೆ ಅಪ್ಪುಗೆ ನೀಡಿದರು. ಈ ವೇಳೆ ಮಗಳನ್ನು ಧೋನಿ ತಬ್ಬಿಕೊಂಡರು. ಈ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
ಧೋನಿ, ರವೀಂದ್ರ ಜಡೇಜಾ ಮತ್ತು ಶಿಸ್ತಿನ ಬೌಲಿಂಗ್‌ನಿಂದ ಸಿಎಸ್‌ಕೆ , ಡಿಸಿ ವಿರುದ್ಧ 27 ರನ್‌ಗಳ ಜಯದೊಂದಿಗೆ ಐಪಿಎಲ್ ಪ್ಲೇ-ಆಫ್ ಸ್ಥಾನಕ್ಕೆ ಹತ್ತಿರವಾಗಲು ನೆರವಾಯಿತು.