alex Certify ಪಿಸ್ತೂಲ್​ ಹಿಡಿದು ಬೆದರಿಸಿ ಸ್ನೇಹಿತೆಯ ಮೇಲೆ ಅತ್ಯಾಚಾರಗೈದ ಪಾಪಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಸ್ತೂಲ್​ ಹಿಡಿದು ಬೆದರಿಸಿ ಸ್ನೇಹಿತೆಯ ಮೇಲೆ ಅತ್ಯಾಚಾರಗೈದ ಪಾಪಿ….!

ಗನ್​ ಪಾಯಿಂಟ್​ ಹಿಡಿದು ಬೆದರಿಸಿ ಸ್ನೇಹಿತನೇ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಶಾಕಿಂಗ್​ ಘಟನೆಯು ಪಂಜಾಬ್​ನ ಜಿರಕ್​ಪುರದಲ್ಲಿ ನಡೆದಿದೆ.

ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ ಅಕ್ಟೋಬರ್​ 29ರಂದು ಬರ್ನಾಲಾದಿಂದ ಬಸ್​ನಲ್ಲಿ ಹೊರಟಿದ್ದ ಯುವತಿ ಮೊಹಾಲಿಯಲ್ಲಿ ಇಳಿಯುವವರಿದ್ದರು. ಕೈಯಲ್ಲಿ ಸಾಕಷ್ಟು ಲಗೇಜ್​ ಇದ್ದ ಕಾರಣ ಸ್ನೇಹಿತ ಕುಲ್ವಿಂದರ್​ ಸಿಂಗ್​​ಗೆ ಕರೆ ಮಾಡಿದ ಯುವತಿ ತನ್ನನ್ನು ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾಳೆ.

ರಾತ್ರಿ 8 ಗಂಟೆ ಸುಮಾರಿಗೆ ಯುವತಿಯನ್ನು ಭೇಟಿಯಾದ ಕುಲ್ವಿಂದರ್​ ಆಕೆಯನ್ನು ಟೊಯೋಟಾ ಇನ್ನೋವಾ ಕಾರಿನ ಮೇಲೆ ಕೂರಿಸಿಕೊಂಡಿದ್ದ. ಈಕೆಯನ್ನು ಮೊಹಾಲಿಯಲ್ಲಿರುವ ಪಿಜಿಗೆ ಕರೆದುಕೊಂಡು ಹೋಗುವ ಬದಲು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾನೆ.

ಸಂತ್ರಸ್ತೆಗೆ ಗನ್​ ತೋರಿಸಿ ಬೆದರಿಸಿದ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಬಳಿಕ ರಸ್ತೆಯ ಮೇಲೆ ಎಸೆದು ತೆರಳಿದ್ದಾನೆ. ಕ್ಯಾಬ್​​​ ಮೂಲಕ ಪಿಜಿಗೆ ಬಂದು ತಲುಪಿದ ಯುವತಿ ಮಾರನೇ ದಿನ ಬೆಳಗ್ಗೆ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಾಗಿ ತಲಾಶ್​ ಮುಂದುವರಿದಿದೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...