ಬೆಂಗಳೂರು : ಝಿಕಾ ವೈರಾಣು ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಮಳೆಗಾಲದಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಇನ್ನಷ್ಟು ದಿನ ಮುನ್ನೆಚ್ಚರಿಕೆ ವಹಿಸಬೇಕು. ಇದೇ ಸೊಳ್ಳೆಯು ಡೆಂಘಿ ಹಾಗೂ ಚಿಕನ್‌ಗುನ್ಯಾವನ್ನೂ ಹರಡುತ್ತದೆ. ಈಡಿಸ್ ಸೊಳ್ಳೆಯ ಸಂತಾನೋತ್ಪತ್ತಿ ತಡೆಗಟ್ಟಲು ಘನತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಬೇಕು.
ರಾಜ್ಯದ ಯಾವ ಭಾಗದಲ್ಲೂ ಮನುಷ್ಯರಲ್ಲಿ ಝಿಕಾ ವೈರಸ್ ವರದಿಯಾಗಿಲ್ಲ. ಆದರೆ ಸೊಳ್ಳೆಗಳಲ್ಲಿ ಮಾತ್ರ ಝಿಕಾ ವೈರಸ್ ಪತ್ತೆಯಾಗಿದೆ. ಝಿಕಾ ಮನುಷ್ಯರಿಗೆ ಅಷ್ಟು ಬಾಧಿಸುವುದಿಲ್ಲ. ಜನರು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಝಿಕಾ ವೈರಸ್ ರೋಗ ಲಕ್ಷಣಗಳು
2-7 ದಿನಗಳವರೆಗೆ ನಿರಂತರ ಜ್ವರ
ಕಣ್ಣುಗಳು ಕೆಂಪಾಗುವುದು
ಸ್ನಾಯು ಸೆಳೆತ
ತಲೆನೋವಿನ ಲಕ್ಷಣಗಳು
ಚರ್ಮದಲ್ಲಿ ದದ್ದುಗಳು
ಮೈ ಕೈ ನೋವು