ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಯುರೋಪಿಯನ್ ಸಂಸತ್ ನಲ್ಲಿ ರಷ್ಯಾ ಕೃತ್ಯವನ್ನು ಮರೆಯುವುದಿಲ್ಲ. ಕ್ಷಮಿಸುವುದಿಲ್ಲ ಎಂದು ಹೇಳಿದ್ದು, ಸಂಸದರು ಉಕ್ರೇನ್ ಅಧ್ಯಕ್ಷರ ಪರವಾಗಿ ನಿಂತು ಚಪ್ಪಾಳೆ ತಟ್ಟಿದರು.
ಖಾರ್ಕಿವ್‌ನ ಸೆಂಟ್ರಲ್ ಸ್ಕ್ವೇರ್ ನಲ್ಲಿ ನಡೆದ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಝೆಲೆನ್ಸ್ಕಿ ವಿಡಿಯೋ ಮೂಲಕ ಯುರೋಪಿಯನ್ ಪಾರ್ಲಿಮೆಂಟ್ ಗೆ ತಿಳಿಸಿದ್ದಾರೆ. ಇದನ್ನು ಯಾರೂ ಕ್ಷಮಿಸುವುದಿಲ್ಲ, ಯಾರೂ ಮರೆಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಝೆಲೆನ್ಸ್ಕಿಗಾಗಿ ನಿಂತು ಚಪ್ಪಾಳೆ ತಟ್ಟಿದ ಸಂಸದರು
ಝೆಲೆನ್ಸ್ಕಿ ಇಂದು ತಮ್ಮ ಭಾಷಣದಿಂದ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ ಹೃದಯಗಳನ್ನು ಗೆದ್ದರು. ಅವರ ಭಾಷಣದ ನಂತರ ಎಲ್ಲ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈ ಸಮಯದಲ್ಲಿ Zelensky ನಮ್ಮ ಎಲ್ಲಾ ನಗರಗಳು ಈಗ ನಿರ್ಬಂಧಿಸಲಾಗಿದೆ. ನಾವು ನಮ್ಮ ಭೂಮಿ ಮತ್ತು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತೇವೆ ಯಾರೂ ನಮ್ಮನ್ನು ಒಡೆಯಲು, ಮುರಿಯಲು ಆಗುವುದಿಲ್ಲ, ನಾವು ಬಲಶಾಲಿಗಳು, ನಾವು ಉಕ್ರೇನಿಯನ್ನರು ಎಂದು ಭಾವುಕರಾಗಿ ಹೇಳಿದ್ದಾರೆ. ಇದಕ್ಕೆ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ಖಾರ್ಕಿವ್ ಮೇಲೆ ರಷ್ಯಾದ ಉಗ್ರ ದಾಳಿ
ಮಂಗಳವಾರ, ಖಾರ್ಕಿವ್ ನ ಸಿವಿಲ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಕಟ್ಟಡದ ಮೇಲೆ ರಷ್ಯಾ ದಾಳಿ ಮಾಡಿದ್ದು, ಕಟ್ಟಡದ ಮೇಲ್ಛಾವಣಿ ಕುಸಿದು ಅವಶೇಷಗಳು ಸುತ್ತಲೂ ಹರಡಿಕೊಂಡಿವೆ. ಮಾಸ್ಕೋದ ಮಿಲಿಟರಿ ಕ್ಲಸ್ಟರ್ ಮತ್ತು ವ್ಯಾಕ್ಯೂಮ್ ಬಾಂಬ್ ದಾಳಿಗಳನ್ನು ನಡೆಸಿದ ನಂತರ ಝೆಲೆನ್ಸ್ಕಿ ಈಗಾಗಲೇ ಪುಟಿನ್ ವಿರುದ್ಧ ಯುದ್ಧ ಅಪರಾಧಗಳ ಆರೋಪವನ್ನು ಮಾಡಿದ್ದರು. ಈ ಸಮಸ್ಯೆಯನ್ನು ಅಂತರರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಖಂಡಿತವಾಗಿಯೂ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಶಾಂತಿಯುತ ಉಕ್ರೇನಿಯನ್ನನ್ನು ಕೊಂದಿದ್ದಕ್ಕಾಗಿ ಜಗತ್ತಿನಲ್ಲಿ ಯಾರೂ ನಿಮ್ಮನ್ನು ಕ್ಷಮಿಸುವುದಿಲ್ಲ. ಹೇಗ್‌ನಲ್ಲಿರುವ ಪ್ರಾಸಿಕ್ಯೂಟರ್‌ಗಳು ಸಾಧ್ಯವಾದಷ್ಟು ಬೇಗ ತನಿಖೆಯನ್ನು ಪ್ರಾರಂಭಿಸಬೇಕೆಂದು ಅವರು ಹೇಳಿದ್ದಾರೆ.