ಚಿಕ್ಕಬಳ್ಳಾಪುರದಲ್ಲಿ: ಚಿಕ್ಕಬಳ್ಳಾಪುರದ ಝೀಕಾ ವೈರಸ್ ಪತ್ತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದೆ.
ಏನಿದೆ ಮಾರ್ಗಸೂಚಿಯಲ್ಲಿ..?
* ಈಡಿಸ್ ಸೊಳ್ಳೆಗಳಿಂದ ಹಬ್ಬುವ ವೈರಸ್ ಇದಾಗಿದೆ.
*ಜನರು ತಮ್ಮ ಪರಿಸರವನ್ನು ಸೊಳ್ಳೆ ಮುಕ್ತವಾಗಿರಿಸಿ.
*ಸೌಮ್ಯ ಲಕ್ಷಣವಿರುವ ಸೋಂಕು ಇದು, ಸಾವಿನ ಸಾಧ್ಯತೆ ಕಮ್ಮಿ.
*ಇದಕ್ಕೆ ನಿರ್ದಿಷ್ಟ ಲಕ್ಷಣವಿಲ್ಲ, ಆದರೆ ನಿರ್ಲಕ್ಷ್ಯ ಬೇಡ. ವೈದ್ಯರಿಂದ ಸೂಕ್ತವಾದ ಚಿಕಿತ್ಸೆ ಪಡೆಯಿರಿ.
*ಝೀಕಾ ವೈರಸ್ ನಿಂದ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು.
*ಕಣ್ಣು ಕೆಂಪಾಗುವುದು, ತಲೆನೋವು, ಮೈ ಕೈ ನೋವು, ಜ್ವರ ಬರುತ್ತದೆ.
*ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.
*ಇಂತಹ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
*ಮನೆ ಮನೆಗೆ ತೆರಳಿ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡಲಿದ್ದಾರೆ.
*ವೈರಸ್ ಪತ್ತೆಯಾದ 5 ಕಿ.ಮೀ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗುವುದು.
ಝೀಕಾ ವೈರಸ್ ಹೊಂದಿರುವ ಸೊಳ್ಳೆಗಳನ್ನು ಈಡಿಸ್ ಸೊಳ್ಳೆಗಳು ಎಂದು ಕರೆಯಲಾಗುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಈಡಿಸ್ ಸೊಳ್ಳೆಯ ಕಡಿತದಿಂದ ಝಿಕಾ ವೈರಸ್ ಹರಡಬಹುದು. ಈ ಸೊಳ್ಳೆ ಕಡಿತದ ಮೂಲಕ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತಹ ಸೋಂಕುಗಳು ಸಹ ಹರಡಬಹುದು.