alex Certify 16ನೇ ವಯಸ್ಸಿನ ಚಿತ್ರ ಶೇರ್​ ಮಾಡಿ ನೆನಪು ಮೆಲುಕು ಹಾಕಿದ ನಟಿ ಜೀನತ್​ ಅಮಾನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16ನೇ ವಯಸ್ಸಿನ ಚಿತ್ರ ಶೇರ್​ ಮಾಡಿ ನೆನಪು ಮೆಲುಕು ಹಾಕಿದ ನಟಿ ಜೀನತ್​ ಅಮಾನ್​

ಬಾಲಿವುಡ್​ನ ಹಿರಿಯ ನಾಯಕಿ ಜೀನತ್ ಅಮಾನ್​ ಅವರು ಫೆಬ್ರವರಿ 11 ರಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಕೆಲವೊಂದು ಆಸಕ್ತಿದಾಯಕ ಪೋಸ್ಟ್‌ಗಳು ಇವೆ.

ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಮ್​ ಸೇರಿರುವ ಜೀನತ್​ ಅಮಾನ್​, ತಮ್ಮ ಹಳೆಯ ಕೆಲವು ವಿಷಯಗಳನ್ನು ಅದರಲ್ಲಿ ಮೆಲುಕು ಹಾಕಿದ್ದಾರೆ. ಅದರಲ್ಲಿ ಒಂದು ತಮ್ಮ ಮಾಡೆಲಿಂಗ್ ದಿನಗಳ ಚಿತ್ರಗಳು. ಅದರಲ್ಲಿಯೂ ಅವರು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಚಿತ್ರವನ್ನು ಶೇರ್​ ಮಾಡಿದ್ದು ಅದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಈಗ ಜೀನತ್​ ಅಮಾನ್​ ಅವರಿಗೆ 71 ವರ್ಷಗಳು. ಆದರೆ ತಾವು 16ನೇ ವಯಸ್ಸಿನಲ್ಲಿ ಇರುವಾಗ ಆಗ್ರಾದಲ್ಲಿ ಚಿತ್ರೀಕರಿಸಿದ ಟೀ ಬ್ರ್ಯಾಂಡ್ ಜಾಹೀರಾತಿನ ಚಿತ್ರವನ್ನು ಶೇರ್​ ಮಾಡಿಕೊಂಡಿದ್ದು, ಅದು ಜನರ ಹೃದಯ ಗೆದ್ದಿದೆ.

ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಾಡೆಲ್​ ಆಗುವ ಮೊದಲು, ಸಿನಿ ರಂಗಕ್ಕೆ ಕಾಲಿಟ್ಟು ಜೀನತ್​ ಅಮಾನ್​ ಆಗುವ ಮೊದಲು, ಪ್ರಪಂಚ ನನ್ನನ್ನು ಸೆಲೆಬ್ರಿಟಿ ಎಂದು ಗುರುತಿಸುವ ಮುನ್ನ ಶಾಲಾ ವಿದ್ಯಾರ್ಥಿನಿಯಾಗಿದ್ದೆ. ಆ ಸಮಯದಲ್ಲಿ ತೆಗೆದ ಚಿತ್ರವಿದು ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಧರಿಸಿರುವ ಕಿವಿಯೋಲೆಗಳು ಈಗಲೂ ತಮ್ಮ ಬಳಿ ಇವೆ ಎಂದು ತಿಳಿಸಿದ್ದಾರೆ.

“ತಾಜ್ ಮಹಲ್ ಚಹಾದ ಜಾಹೀರಾತು ಇದಾಗಿದೆ. ಆಗ್ರಾದ ಸ್ಥಳದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ನನಗೆ 16 ವರ್ಷ ವಯಸ್ಸಾಗಿರಬೇಕು ಮತ್ತು ನನ್ನ ಹೊಸ ಕೆಲಸದ ಬಗ್ಗೆ ನಾನು ತುಂಬಾ ಶ್ರದ್ಧೆ ಹೊಂದಿದ್ದೆ. ಇದು ನನಗೆ ಬಹಳ ಖುಷಿ ಕೊಟ್ಟ ಚಿತ್ರ. ತಾಜ್ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದೆ” ಎಂದು ನಟಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...