alex Certify ಪ್ರವಾಹ ಸಂದರ್ಭದಲ್ಲಿ ಮೋಟಾರು ವಿಮೆ ಹೇಗೆ ರಕ್ಷಣೆ ನೀಡುತ್ತದೆ ? ವಾಹನ ಮಾಲೀಕರಿಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹ ಸಂದರ್ಭದಲ್ಲಿ ಮೋಟಾರು ವಿಮೆ ಹೇಗೆ ರಕ್ಷಣೆ ನೀಡುತ್ತದೆ ? ವಾಹನ ಮಾಲೀಕರಿಗೆ ಇಲ್ಲಿದೆ ಮಾಹಿತಿ

ಇತ್ತೀಚೆಗೆ ಬೆಂಗಳೂರಿನಲ್ಲಿ ಅಪರಿಮಿತ ಮಳೆ ಸುರಿದು ಸಾವಿರಾರು ವಾಹನಗಳು ಜಲಾವೃತವಾಯಿತು. ಸೇಫ್​ ಎಂದು ನಿಲ್ಲಿಸಿದ್ದ ಸ್ಥಳವೂ ವಾಹನಗಳಿಗೆ ಸೇಫ್​ ಇರಲಿಲ್ಲ. ರಸ್ತೆಯಲ್ಲೇ ವಾಹನಗಳು ಸಿಕ್ಕು ನೀರಿನಲ್ಲಿ ಮುಳುಗಿತು.

ಆಕಸ್ಮಿಕವಾಗಿ ಇಂತಹ ಪರಿಸ್ಥಿತಿ ಎದುರಾದಾಗ ನೆನಪಾಗುವುದೇ ವಿಮೆ. ಹಾಗಿದ್ದಲ್ಲಿ ಈ ಪ್ರವಾಹ ಸಂದರ್ಭದಲ್ಲಿ ವಿಮೆ ಯಾವ ರೀತಿಯಲ್ಲಿ ನೆರವಿಗೆ ಬರಬಹುದು ಎಂದು ಪಾಲಿಸಿ ಬಜಾರ್​ ಡಾಟ್​ಕಾಮ್​ನ ಮೋಟಾರ್​ ಇನ್ಶುರೆನ್ಸ್​ ರಿನೀವಲ್​ ವಿಭಾಗದ ಮುಖ್ಯಸ್ಥ ಅಶ್ವಿನಿ ದುಬೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಪ್ರವಾಹ ಸಂದರ್ಭವಾಗಿರಬಹುದು, ದೆಹಲಿ- ಅಥವಾ ಮುಂಬೈನಲ್ಲಿ ಇಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ ಪ್ರತಿ ವರ್ಷ ಮಳೆಗಾಲದಲ್ಲಿ ಇಂತಹ ಘಟನೆಗಳು ವರದಿಯಾಗುತ್ತವೆ. ಹವಾಮಾನ ವೈಪರೀತ್ಯ ಘಟನೆಗಳು ಇನ್ನು ಮುಂದೆ ಮಾನ್ಸೂನ್​ಗೆ ಸೀಮಿತವಾಗಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ, ಭಾರತವು ಎಂಟು ಚಂಡಮಾರುತಗಳಿಗೆ ಸಾಕ್ಷಿಯಾಗಿದೆ, ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಸಾವುನೋವುಗಳು ಮತ್ತು ಮೋಟಾರು ವಾಹನಗಳು ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಗಮನಾರ್ಹವಾದ ವಿನಾಶ ಸಂಭವಿಸಿದೆ ಎಂದು ಅವರು ವಿವರಿಸಿದ್ದಾರೆ.

ಇಂತಹ ಪರಿಸ್ಥಿತಿ ಎದುರಾದಾಗ ವಾಹನವನ್ನು ರಕ್ಷಿಸುವ ಸಮಗ್ರ ಮೋಟಾರು ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಒಂದು ಸಮಗ್ರ ವಾಹನ ವಿಮಾ ಪಾಲಿಸಿಯು ವಾಹನಕ್ಕೆ ಹಾನಿಯಾಗುವ ಕಾರಣದಿಂದ ಉಂಟಾಗಬಹುದಾದ ಭಾರೀ ವೆಚ್ಚಗಳಿಂದ ರಕ್ಷಿಸುತ್ತದೆ. ಹಾನಿಯು ಅಪಘಾತದಿಂದಾಗಿರಬಹುದು ಅಥವಾ ಭೂಕಂಪಗಳು, ಭೂಕುಸಿತಗಳಂತಹ ನೈಸಗಿರ್ಕ ವಿಕೋಪಗಳಿಂದಾಗಿರಬಹುದು ಅಥವಾ ಈ ಸಂದರ್ಭದಲ್ಲಿ, ನಿರಂತರ ಮಳೆ ಮತ್ತು ಚಂಡಮಾರುತಗಳ ಕಾರಣದಿಂದಾಗಿರಬಹುದು, ವಾಹನ ವಿಮಾ ಪಾಲಿಸಿಯು ಹಾನಿಯನ್ನು ಸರಿಪಡಿಸಲು ಮತ್ತು ಬಿಡಿ ಭಾಗಗಳನ್ನು ಬದಲಿಸಲು ವೆಚ್ಚವನ್ನು ಒಳಗೊಂಡಿರುತ್ತದೆ.

ವಿಪರೀತ ಮಾನ್ಸೂನ್​ ಪರಿಸ್ಥಿತಿ ಪದೇಪದೆ ಎದುರಾಗುತ್ತಿರುವ ಸಮಯದಲ್ಲಿ, ಸಮಗ್ರ ಮೋಟಾರು ವಿಮಾ ಪಾಲಿಸಿಯನ್ನು ಹೊಂದುವುದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ.

ಒಂದು ಸಮಗ್ರ ಕಾರು ವಿಮಾ ಪಾಲಿಸಿಯು ವಾಹನ ಹಾನಿಗೊಳಗಾದಾಗ ಹೆಚ್ಚಿನ ದುರಸ್ತಿ ವೆಚ್ಚಗಳನ್ನು ಒಳಗೊಂಡಿರುತ್ತದೆ, ಆದರೆ ಕೆಲವು ವೆಚ್ಚಗಳು ಒಳಗೊಂಡಿರುವುದಿಲ್ಲ. ಉದಾಹರಣೆಗೆ, ಹೆಚ್ಚಿನ ಪಾಲಿಸಿಗಳು ಎಂಜಿನ್​ಗೆ ದ್ರವರೂಪದ ಹಾನಿ ಮತ್ತು ಲೂಬ್ರಿಕೆಂಟ್​ಗಳು, ಎಂಜಿನ್​ ಆಯಿಲ್​, ಗೇರ್​ಬಾಕ್ಸ್​, ನೆಟ್ಸ್​ ಮತ್ತು ಬೋಲ್ಟ್​ಗಳಂತಹ ವಸ್ತುಗಳ ಬದಲಿಸುವುದನ್ನು ಹೊರತುಪಡಿಸುತ್ತವೆ.

ಆದರೆ, ವಾಹನವನ್ನು ಸಂರ್ಪೂಣವಾಗಿ ರಕ್ಷಿಸಲಾಗುವ ಆಡ್​-ಆನ್​ ಕವರ್​ಗಳನ್ನು ಬಳಸಿಕೊಂಡು ವಿಮಾ ರಕ್ಷಣೆಯನ್ನು ವಿಸ್ತರಿಸಬಹುದು ಎಂಬುದನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳಬಹುದೆಂಬುದು ಅವರ ಅಭಿಪ್ರಾಯವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...