alex Certify ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ‘ಆರೋಗ್ಯ ವಿಮೆ’ ಕ್ಲೇಂ ಮಾಡುವುದು ಹೇಗೆ..? ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ‘ಆರೋಗ್ಯ ವಿಮೆ’ ಕ್ಲೇಂ ಮಾಡುವುದು ಹೇಗೆ..? ನಿಮಗೆ ತಿಳಿದಿರಲಿ ಈ ವಿಷಯ

ಕೋವಿಡ್ ಎರಡನೇ ಅಲೆಗೆ ದೇಶವಾಸಿಗಳು ತತ್ತರಿಸಿದ್ದು, ಆಸ್ಪತ್ರೆ ವೆಚ್ಚಕ್ಕೆಂದು ತಮ್ಮ ಆರೋಗ್ಯ ವಿಮೆಯ ದುಡ್ಡನ್ನು ಕ್ಲೇಂ ಮಾಡಬೇಕಾದ ನಿದರ್ಶನಗಳನ್ನು ಎದುರಿಸುತ್ತಿದ್ದಾರೆ.

ದೀರ್ಘಾವಧಿಗೆ ನೀವೇನಾದರೂ ಆಸ್ಪತ್ರೆ ಸೇರಿದ್ದು, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ಆರೋಗ್ಯ ವಿಮೆಯ ದುಡ್ಡನ್ನು ಹಿಂಪಡೆಯಬೇಕಾದಲ್ಲಿ, ನಿಮ್ಮ ಆಯ್ಕೆಯಂತೆ ಯಾವುದೇ ಅನುಪಾತದಲ್ಲಿ ಈ ವಿಮೆಗಳಿಂದ ನೀವು ಕ್ಲೇಂ ಮಾಡಬಹುದಾಗಿದೆ.

ಉದಾಹರಣೆಗೆ; ನೀವು ಪ್ಲಾನ್ ಎಕ್ಸ್‌ನಲ್ಲಿ 5 ಲಕ್ಷ ಹಾಗೂ ಪ್ಲಾನ್ ವೈನಲ್ಲಿ 5 ಲಕ್ಷ ರೂ.ಗಳ ವಿಮೆ ಹೊಂದಿದ್ದು, 7 ಲಕ್ಷ ರೂ.ಗಳ ಸಿಂಗಲ್ ಕ್ಲೇಂ ಒಂದನ್ನು ಪಡೆಯಬೇಕಾದಲ್ಲಿ ನಿಮಗೆ ಕೆಳಕಂಡ ಆಯ್ಕೆಗಳಿವೆ.

1. ಪ್ಲಾನ್ ಎಕ್ಸ್‌ನಿಂದ ಐದು ಲಕ್ಷ ಕ್ಲೇಂ ಮಾಡಿ ಮಿಕ್ಕ ಎರಡು ಲಕ್ಷ ರೂಪಾಯಿಯನ್ನು ಪ್ಲಾನ್ ವೈನಲ್ಲಿ ಕ್ಲೇಂ ಮಾಡಿ.

2. ಒಟ್ಟಾರೆ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಕ್ಲೇಂ ಮಾಡಬಹುದಾಗಿದೆ. ಪ್ಲಾನ್ ಎಕ್ಸ್‌ನಿಂದ ನಾಲ್ಕು ಲಕ್ಷ ರೂ.ಗಳು ಹಾಗೂ ಪ್ಲಾನ್ ವೈನಿಂದ ಮೂರು ಲಕ್ಷ ರೂಪಾಯಿಗಳನ್ನು ಕ್ಲೇಂ ಮಾಡಿ.

ನಿಮ್ಮ ಅನುಕೂಲ ಅಥವಾ ಷರತ್ತುಗಳನ್ನು ಅನ್ವಯಿಸಿ ನಿಮ್ಮ ಆಯ್ಕೆಯನುಸಾರ ಕ್ಲೇಂಗಳನ್ನು ಮಾಡಬಹುದಾಗಿದೆ. ಬಹು ಯೋಜನೆಗಳಿದ್ದ ವೇಳೆ, ವಿಮೆ ಮಾಡಲಾದ ದುಡ್ಡನ್ನು ಬಳಸುವಲ್ಲಿ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.

ಕ್ಲೇಂಗೆ ನೀವೇನಾದೂ ಅರ್ಜಿ ಸಲ್ಲಿಸಿದಲ್ಲಿ, ನಿಮ್ಮ ಕ್ಲೇಂಗಳನ್ನು ನಗದುರಹಿತವಾಗಿ ನೇರ ಆಸ್ಪತ್ರೆಗೆ ಪಾವತಿ ಅಥವಾ ಮರುಪಾವತಿ ರೂಪದಲ್ಲಿ ಮಿಕ್ಕ ಮೊತ್ತವನ್ನು ಪಡೆಯಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...