
ನಾಯಿಗಳಿಗೆ ತರಬೇತಿ ಕೊಡುವ ವೇಳೆ, ಅವುಗಳಿಗೆ ವಿದ್ಯುತ್ ಸಿಮ್ಯುಲೇಷನ್ ಒದಗಿಸುವ ಎಲೆಕ್ಟ್ರಿಕ್ ಕಾಲರ್ ಒಂದನ್ನು ಅಳವಡಿಸಲಾಗುತ್ತದೆ.
ಈ ವಸ್ತುವನ್ನು ಬಳಸಿ ನಾಯಿಗಳ ವರ್ತನೆಗಳನ್ನು ಬೇಕಾದಂತೆ ತಿದ್ದಲಾಗುತ್ತದೆ. ಆದರೂ ನಾಯಿಗಳಿಗೆ ಇದು ಹಿಂಸೆ ಆಗುತ್ತದೆ ಎಂಬ ಬಲವಾದ ಮಾತುಗಳು ಇವೆ.
’ಮುಳುಗುತ್ತಿದ್ದ ಮಹಿಳೆ’ ರಕ್ಷಿಸಲು ಬಂದ ತುರ್ತು ತಂಡಕ್ಕೆ ಕಾದಿತ್ತು ಶಾಕ್….!
ನಾಯಿಯೊಂದನ್ನು ಸಾಕಿಕೊಂಡಿರುವ ಸ್ಟೀವ್ ಯೆಂಡ್ಲ್ ಹೆಸರಿನ ಈತ ತನ್ನ ಪ್ರೀತಿಯ ನಾಯಿಯ ಶಾಕ್ ಕಾಲರ್ ಅನ್ನು ಖುದ್ದು ತಾನೇ ಒಮ್ಮೆ ಹಾಕಿಕೊಂಡು ನೋಡಲು ಮುಂದಾಗಿದ್ದಾರೆ. ನಾಯಿ ಬೊಗಳದಂತೆ ನೋಡಿಕೊಳ್ಳಲು ರಚಿಸಲಾಗಿರುವ ಈ ಕಾಲರ್ ಅನ್ನು ಒಮ್ಮೆ ನೋಡಿದ ಸ್ಟೀವ್ಗೆ ನಾಯಿಗಳ ಪಾಡು ಏನೆಂದು ಅರಿವಿಗೆ ಬಂದಿದ್ದು, ತಾನೆಂದೂ ಆ ಕಾಲರ್ ಅನ್ನು ನಾಯಿಗೆ ಅಳವಡಿಸುವುದಿಲ್ಲ ಎಂದು ಶಪಥಗೈದಿದ್ದಾರೆ.