ಬೆಂಗಳೂರು: ಹೊಸ ಅಫಿಡವಿಟ್ ಸಲ್ಲಿಸಿದ ಬಳಿಕ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ ನಾಮಪತ್ರ ಅಂಗೀಕಾರವಾಗಿದೆ.
ಚುನಾವಣಾಧಿಕಾರಿಗೆ ಜಮೀರ್ ಅಹ್ಮದ್ ಹೊಸ ಅಫಿಡವಿಟ್ ಸಲ್ಲಿಸಿದ್ದಾರೆ. ಹೊಸ ಅಫಿಡವಿಟ್ ಸಲ್ಲಿಸಿದ ನಂತರ ಚುನಾವಣಾಧಿಕಾರಿ ಜಮೀರ್ ಅಹಮ್ಮದ್ ಅವರ ನಾಮಪತ್ರವನ್ನು ಅಂಗೀಕರಿಸಿದ್ದಾರೆ.
ಜಮೀರ್ ಅಹಮದ್ ನಾಮಪತ್ರ ಸಲ್ಲಿಕೆ ವೇಳೆ ಒಂದು ಕಾಲಂ ಖಾಲಿ ಬಿಟ್ಟಿದ್ದಾರೆ. ಲೋಕಾಯುಕ್ತಕ್ಕೆ ಮಾಹಿತಿ ಸಲ್ಲಿಸುವ ವೇಳೆ ತನ್ನ ಅವಲಂಬಿತರ ಹೆಸರಿನಲ್ಲಿ ತಾಯಿ ಹೆಸರು ಸೇರಿಸಿದ್ದಾರೆ. ಆದರೆ, ನಾಮಪತ್ರದಲ್ಲಿ ಮಾತ್ರ ತಾಯಿ ಹೆಸರನ್ನು ಪ್ರಸ್ತಾಪಿಸಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದು, ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಚಾಮರಾಜಪೇಟೆಯ ನವಭಾರತ ಸೇನಾ ಪಾರ್ಟಿ ಅಭ್ಯರ್ಥಿ ರುಕ್ಮಾಂಗ ದೂರು ಸಲ್ಲಿಸಿದ್ದರು.