ಬೆಂಗಳೂರು: ಶಾಸಕ ಜಮೀರ್ ಅಹಮದ್ ಅವರ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದ್ದು, ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜಮೀರ್ ಅಹಮದ್ ಮತ್ತು ಅವರ ಸಹೋದರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ FIR ದಾಖಲು ಮಾಡಿಕೊಳ್ಳಲಾಗಿದೆ. ಶಾಹೀತಾ ನಾಸೀನ್ ಮತ್ತು ತಸ್ಲೀಮ್ ಫಾತೀಮಾ ದೂರು ನೀಡಿದ್ದರು. ಜಮೀರ್ ಕುಟುಂಬದ ವಿರುದ್ಧ ಕೋರ್ಟಿಗೆ ಖಾಸಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್ ಆದೇಶದಂತೆ ಎಫ್ಐಆರ್ ದಾಖಲಿಸಲಾಗಿದೆ. ಜಮೀಲ್ ಅಹ್ಮದ್, ಜಮೀರ್ ಅಹಮದ್, ಅವರ ನ್ಯಾಷನಲ್ ಟ್ರಾವೆಲ್ಸ್, ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಿವೇಶನ ಕಬಳಿಕೆ ಆರೋಪದಡಿ ಕೋರ್ಟ್ ಗೆ ದೂರು ನೀಡಲಾಗಿತ್ತು.