
ಬೆಂಗಳೂರು: ಐಎಂಎ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.
ಐಎಂಎ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ, ದುಬಾರಿ ವೆಚ್ಚದ ಮನೆ ಕಟ್ಟಿದಕ್ಕೆ ದಾಳಿ ನಡೆದಿದೆ. ಐಎಂಎ ವಿಚಾರಕ್ಕಾಗಿ ದಾಳಿ ನಡೆದಿಲ್ಲ. ಇಡಿ ಅಧಿಕಾರಿಗಳು ಐಎಂಎ ವಿಚಾರ ಪ್ರಸ್ತಾಪವನ್ನೇ ಮಾಡಿಲ್ಲ ಎಂದು ತಿಳಿಸಿದ್ದಾರೆ.
ದುಬಾರಿ ವೆಚ್ಚದ ಮನೆ ನಿರ್ಮಾಣ ಮಾಡಿದ್ದಕ್ಕೆ ಅವರು ಮಾಹಿತಿ ಕೇಳಿದ್ದಾರೆ. ಮನೆ ಜಾಗ ಖರೀದಿಸಿದ್ದು ಯಾವಾಗ, ಎಷ್ಟು ವೆಚ್ಚವಾಗಿದೆ ಎಂಬ ವಿಚಾರವನ್ನು ಇಡಿ ಅಧಿಕಾರಿಗಳಿಗೆ ನೀಡಿದ್ದೇವೆ. ಅವರು ಬ್ಯಾಂಕಿನಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ನಾವು ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.