ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ಸಚಿವ ಜಮೀರ್ ಅಹ್ಮದ್ ವಿರುದ್ಧ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ರಾಜ್ಯ ಹೈಕೋರ್ಟ್ ಏಕಸದಸ್ಯಪೀಠ ವಜಾ ಮಾಡಿದೆ.
ಸಚಿವ ಜಮೀರ್ ಅಹ್ಮದ್ ಆಯ್ಕೆ ಪ್ರಶ್ನಿಸಿ ಚಾಮರಾಜಪೇಟೆಯ ಮತದಾರ ಶಶಾಂಕ್ ಜಿ.ಶ್ರೀಧರ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಯೋಜನೆಗಳು ಪಕ್ಷಗಳ ತಪ್ಪು ಯೋಜನೆ ಎನ್ನಬಹುದು ಆದರೆ ಚುನಾವಣಾ ಅಕ್ರಮ ಎಂದು ಕರೆಯಲು ಸಾಧ್ಯವಿಲ್ಲ. ಜನಪ್ರಾತಿನಿದ್ಯ ಕಾಯ್ದೆ ಸೆಕ್ಷನ್ 123ರರ ಅನ್ವಯ ಪಕ್ಷದ ಪ್ರಣಾಳಿಕೆಯನ್ನು ಅಕ್ರಮ ಎಂದು ಹೇಳಲಾಗದು . ಕಾಂಗ್ರೆಸ್ ನ 5 ಗ್ಯಾರಂಟಿ ಯೋಜನೆಗಳು ಜನ ಕಲ್ಯಾಣ ಯೋಜನೆಗಳು ಎಂದು ಹೇಳಬಹುದು. ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯೇ? ಎಂಬುದು ಬೇರೆ ವಿಚಾರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.