ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೊದಲು ನನ್ನನ್ನು ಫೇಸ್ ಮಾಡಲಿ ಎಂದು ಸಚಿವ ಜಮೀರ್ ಅಹ್ಮದ್ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿರೋದು ಸರ್ಕಾರ ಅಲ್ಲ. ಲೋಕಾಯುಕ್ತ ಎಸ್ ಐಟಿ. ನನ್ನನ್ನು ಯಾರೂ ಏನೂ ಮಾಡಲು ಆಗಲ್ಲ ಎಂದು ಹೆಚ್.ಡಿ.ಕೆ ಹೇಳಿದ್ದಾರೆ. ಎಸ್ ಐಟಿ ತನಿಖೆಗೆ ಅನುಮತಿ ಕೇಳಿರುವಾಗ ಸಿದ್ದರಾಮಯ್ಯ ಮಧ್ಯೆ ಯಾಕೆ ಬರ್ತಾರೆ. ಅನಗತ್ಯವಾಗಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದಾರೆ ಎಂಫ಼ು ಕಿಡಿಕಾರಿದರು.
ಕುಮಾರಸ್ವಾಮಿಯವರೇ ಮುಡಾದಲ್ಲಿ ಸಿದ್ದರಾಮಯ್ಯ ಪಾತ್ರವೇನಿದೆ? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾವುದೇ ಜಾಗ ತೆಗೆದುಕೊಂಡಿಲ್ಲ. ಬದಲಿ ಜಾಗ ಕೊಡಿ ಎಂದು ಅವರ ಶ್ರೀಮತಿ ಪತ್ರ ಬರೆದಿದ್ದರು. ಪತ್ರದ ಪ್ರಕಾರ ಬಿಜೆಪಿ ಅವಧಿಯಲ್ಲಿ ಸೈಟ್ ಕೊಟ್ಟಿದ್ದಾರೆ. ಕೇವಲ ಸಿದ್ದರಾಮಯ್ಯ ಅವರ ಪತ್ನಿ ಮಾತ್ರ ಸೈಟ್ ಕೊಟ್ಟಿಲ್ಲ. ಹಲವರಿಗೆ ಸೈಟ್ ಹಂಚಿಕೆಯಾಗಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವಾದರೂ ಏನಿದೆ? ಎಂದು ಪ್ರಶ್ನಿಸಿದರು. ಕುಮರಸ್ವಾಮಿಯವರು ಸಿದ್ದರಾಮಯ್ಯನವರನ್ನಲ್ಲ, ಮೊದಲು ನನ್ನನ್ನು ಫೇಸ್ ಮಾಡಲಿ. ಮೊದಲು ಕುಮಾರಸ್ವಾಮಿ ರಾಜಿನಾಮೆ ಕೊಡಲಿ ಎಂದು ಕಿಡಿಕಾರಿದ್ದಾರೆ.