ನೀವು ಇನ್‌ಸ್ಟಾಗ್ರಾಮ್‌ನ ನಿಯಮಿತ ಬಳಕೆದಾರರಾಗಿದ್ದರೆ, ಕುನ್ ಫಯಾ ಕುನ್ ಟ್ರೆಂಡ್ ಮಾಡುತ್ತಿರುವ ಜನರ ರೀಲ್ ಗಳನ್ನು ನೀವು ನೋಡಿರಬಹುದು. ಸೂಪರ್ ಫನ್ ಟ್ರೆಂಡ್‌ಗೆ ಜನರು ರಣಬೀರ್ ಕಪೂರ್ ಅವರ ಹಿಟ್ ಚಲನಚಿತ್ರ ರಾಕ್‌ಸ್ಟಾರ್‌ನ ದೃಶ್ಯವನ್ನು ಮರುಸೃಷ್ಟಿಸಿದ್ದು ಅದರ ವಿಡಿಯೋ ವೈರಲ್ ಆಗಿದೆ.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರೇ ಖುದ್ದು ಈ ದೃಶ್ಯ ಶೇರ್ ಮಾಡಿಕೊಂಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಯುವರಾಜ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಯುವರಾಜ್‌ನ ತಾಯಿ ಶಬನಮ್ ಸಿಂಗ್, ಕುನ್ ಫಯಾ ಕುನ್ ಹಿನ್ನೆಲೆಯಲ್ಲಿ ಆಡುತ್ತಿರುವಾಗ ಯುವರಾಜ್ ಮತ್ತು ಅವರ ಸಹೋದರ ಜೋರಾವರ್‌ನನ್ನು ಮನೆಯಿಂದ ಹೊರಗೆ ದಬ್ಬಿರುವುದನ್ನು ಕಾಣಬಹುದು. ಇದಕ್ಕೆ ಕಾರಣ ಅವರು ‘ಧನಿಯಾ’ ತನ್ನಿ ಎಂದರೆ ‘ಪುದಿನ’ ತಂದಿದ್ದಕ್ಕೆ!
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಎರಡು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಜನರು ಇದನ್ನು ನೋಡಿ ಬಿದ್ದೂ ಬಿದ್ದೂ ನಗುತ್ತಿದ್ದಾರೆ.
https://youtu.be/_ITdsO1ulE0