ದಕ್ಷಿಣ ಭಾರತೀಯ ಸಂಗೀತ ಲೋಕದ ಆತ್ಮವಾದ ಕರ್ನಾಟಕ ಸಂಗೀತದ ಸಾರವನ್ನು ಬಿಡಿಸಿ ಹೇಳಲು ತಮ್ಮದೇ ಟಿಪಿಕಲ್ ಐಡಿಯಾದವೊಂದನ್ನು ಬಳಸಿದ ಸಂಗೀತಜ್ಞ ಯುವರಾಜ ರಾಮ ವರ್ಮಾ, ನೆಟ್ಟಿಗರನ್ನು ನಕ್ಕು ನಲಿಸಿದ್ದಾರೆ.
ಸಂಗೀತದ ಏಳು ಸ್ವರಗಳನ್ನು ಬಳಸಿ ’ನೀನು ದಪ್ಪಗಿರುವೆ’ ಎಂಬ ಸಾಲನ್ನು ರಾಗಮಯವಾಗಿ ಹಾಡಲು ನೋಡುವ ವರ್ಮಾ, ಈ ಸಾಲನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಹಾಡಿದ್ದಾರೆ — ಕನ್ನಡ, ತಮಿಳು, ತೆಲುಗು, ಮಲೆಯಾಳಂ.
ಪಾನ್ ತಿಂದರೆ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ
ಕಳೆದ ಅಕ್ಟೋಬರ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಯುವರಾಜರು ಅದ್ಯಾವ ಮಟ್ಟಿಗೆ ವಿನೋದಮಯವಾಗಿ ಈ ವಿಚಾರವನ್ನು ವರ್ಣಿಸಿದ್ದಾರೆ ಎಂಬುದನ್ನು ನಾವು ಪದಗಳಲ್ಲಿ ಹಿಡಿದುಕೊಡುವುದಕ್ಕಿಂತ ನೀವೇ ಒಮ್ಮೆ ಖುದ್ದು ನೋಡಿ ಆನಂದಿಸಿ.