![](https://kannadadunia.com/wp-content/uploads/2023/12/yuvanidhi-1.jpg)
ಬೆಂಗಳೂರು : ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಡಿಸೆಂಬರ್ 26 ರಿಂದ ನೋಂದಣಿ ಶುರುವಾಗಲಿದ್ದು, ಡಿಪ್ಲೋಮಾ, ಪದವೀಧರರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಡಿ.26 ರಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಯುವನಿಧಿ ನೋಂದಣಿಗೆ ಚಾಲನೆ ನೀಡಲಿದ್ದಾರೆ, ಜನವರಿ 12 ರಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
ಯುವ ನಿಧಿ ನಿರುದ್ಯೋಗ ಭತ್ಯೆ ಯಾರಿಗೆ ಎಷ್ಟು?
. ಪದವೀಧರರಿಗೆ ಪ್ರತಿ ತಿಂಗಳು 3000 ರೂಪಾಯಿ
. ಡಿಪ್ಲೊಮೋ ಪದವೀಧರರಿಗೆ ಪ್ರತಿ ತಿಂಗಳು 1500 ರೂಪಾಯಿ
ಎಲ್ಲಿಯವರೆಗೆ ಸಿಗಲಿದೆ ಭತ್ಯೆ?
- 2 ವರ್ಷದವರೆಗೆ ಅಥವಾ ಉದ್ಯೋಗ ಸಿಗುವವರೆಗೆ
ಯುವನಿಧಿ ಯೋಜನೆಗೆ ಬೇಕಿರುವ ದಾಖಲೆಗಳು
- ಪದವಿ/ಡಿಪ್ಲೊಮೋ ಪ್ರಮಾಣಪತ್ರ
- ಕರ್ನಾಟಕದಲ್ಲಿ ಕನಿಷ್ಠ 6 ವರ್ಷ ವಾಸವಿರುವ ದಾಖಲೆಗಳು
ರಾಜ್ಯದ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ
ಯಾರು ಅರ್ಹರು?
2023 ರಲ್ಲಿ ಪದವಿ/ಡಿಪ್ಲೊಮೋ ಪದವಿ ಪಡೆದು 6 ತಿಂಗಳಾದರೂ ಉದ್ಯೋಗ ಪಡೆಯದ ನಿರುದ್ಯೋಗಿ ಪದವೀಧರರು
ಯಾರು ಅನರ್ಹರು?
ಸರ್ಕಾರಿ / ಸರ್ಕಾರಿ ಅನುದಾನಿತ ಸಂಸ್ಥೆ / ಖಾಸಗಿ ವಲಯದ ಉದ್ಯೋಗ ಹೊಂದಿರುವ ಅಭ್ಯರ್ಥಿಗಳು
ಸ್ವಯಂ ಉದ್ಯೋಗ ಹೊಂದಿರುವ ಅಭ್ಯರ್ಥಿಗಳು
ವಿದ್ಯಾಭ್ಯಾಸ ಮುಂದುವರೆಸಿರುವ ಅಭ್ಯರ್ಥಿಗಳು
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಯುವನಿಧಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ನೀವು ಸೇವಾಸಿಂಧು ಪೋರ್ಟಲ್ https://sevasindhu.karnataka.gov.inಗೆ ಬೇಟಿ ನೀಡಬೇಕಾಗುತ್ತದೆ. ಡಿಸೆಂಬರ್ 26 ರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು