![](https://kannadadunia.com/wp-content/uploads/2023/12/yuvanidhi-2.jpg)
ಬೆಂಗಳೂರು : ಕಾಂಗ್ರೆಸ್ ಐದನೇ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದೆ. ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ.
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ನಿಗದಿ ಮಾಡಿದ್ದರೆ, ಡಿಪ್ಲೊಮ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ಸಿಗಲಿದೆ. ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ನಿರುದ್ಯೋಗಿ ಯುವಕರಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಯು 2 ವರ್ಷಗಳ ನಂತರ ಅಥವಾ 2 ವರ್ಷಗಳ ಅವಧಿಯಲ್ಲಿ ಉದ್ಯೋಗವನ್ನು ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ.
ಯುವನಿಧಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?
ಯುವನಿಧಿಗೆ ಅರ್ಜಿ ಸಲ್ಲಿಸಲು ಮೊದಲು ಅಭ್ಯರ್ಥಿ ಕರ್ನಾಟಕದವರಾಗಿರಬೇಕು
ಕರ್ನಾಟಕದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ
ಹತ್ತನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಅಂಕಪಟ್ಟಿ
ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ(ಅನ್ವಯಿಸಿದಲ್ಲಿ)
ಬ್ಯಾಂಕ್ ಖಾತೆ ವಿವರ
ಆದಾಯ ಪ್ರಮಾಣಪತ್ರ ದಾಖಲೆಯನ್ನೊಳಗೊಂಡ ಸ್ವಯಂ ಘೋಷಣಾ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ
ಮೊದಲಿಗೆ sevasindhugs.karnataka. gov.in ಲಾಗಿನ್ ಆಗಬೇಕು.
nad. karnataka.gov.in/#/YuvaNidhi ಜಾಲತಾಣದಲ್ಲಿ ಲಾಗಿನ್ ಆಗಬೇಕು.
ಬಳಿಕ ಪದವಿ/ಡಿಪ್ಲೊಮಾ ಪ್ರಮಾಣ ಪತ್ರದಲ್ಲಿ ನೀಡಿರುವ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಪರಿಶೀಲಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಸೇವಾಸಿಂಧು ಮುಖಪುಟದಲ್ಲಿ ಲಿಂಕ್ ನೀಡಲಾಗಿದೆ.
ಮುಖಪುಟದಲ್ಲಿ ಲಾಗ್‌ಆನ್ ನಂತರ ಅರ್ಜಿ ನಮೂನೆ ತೆರೆದುಕೊಳ್ಳಲಿದ್ದು ಮೊದಲಿಗೆ ಅಭ್ಯರ್ಥಿಗಳು ನಿಬಂಧನೆಗಳನ್ನು ಓದಿ ಮೊದಲ ಘೋಷಣೆ ಮಾಡಿಕೊಳ್ಳಬೇಕು
ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು
ಆಧಾರ್ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಕೆವೈಸಿ ಮಾಹಿತಿ ಪಡೆಯಬೇಕು
ವಿದ್ಯಾರ್ಹತೆ ಮಾಹಿತಿ ಸಂಬಂಧ ಪ್ರಮಾಣ ಪತ್ರದಲ್ಲಿರುವ ನೋಂದಣಿ ಸಂಖ್ಯೆ ನಮೂದಿಸಿದ ತಕ್ಷಣ ಸ್ವಯಂಚಾಲಿತವಾಗಿ ಎನ್‌ಡಿ ಪೋರ್ಟಲ್‌ನಿಂದ ಸಕ್ರಿಯಗೊಳಿಸುತ್ತದೆ.
ಜಾತಿ ಪ್ರವರ್ಗ ಆಯ್ಕೆ ಮಾಡಿಕೊಳ್ಳಬೇಕು
ಮೊಬೈಲ್ ಸಂಖ್ಯೆ ನೀಡಿ ಒಟಿಪಿ ಪಡೆಯಬೇಕು. ಇ-ಮೇಲ್ ವಿಳಾಸ ದಾಖಲಿಸಿ ಒಟಿಪಿ ಪಡೆದು ಮತ್ತೊಮ್ಮೆ ದಾಖಲಿಸಬೇಕು.
ಅಂತಿಮವಾಗಿ ಮತ್ತೊಮ್ಮೆ ಸ್ವಯಂ ಘೋಷಣೆ ಮಾಡಿ ನಂತರ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳಲಿದೆ
ಅರ್ಜಿ ಸ್ವೀಕೃತಿ ಯಶಸ್ವಿಯಾಗಿರುವ ಬಗ್ಗೆ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತದೆ. ನಂತರ ಸ್ವೀಕೃತಿ ಸೃಜನೆಯಾಗಲಿದ್ದು, ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.