ಬೆಂಗಳೂರು: ನಟ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಯುವ ರಾಜ್ ಕುಮಾರ್ ಪತ್ನಿಗೆ ವಿಚ್ಛೇದ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ನಟಿ ಸಪ್ತಮಿಗೌಡ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿತ್ತು. ಯುವ ಪ್ರಕರಣದಲ್ಲಿ ತನ್ನ ಹೆಸರು ಎಳೆದು ತಂದು ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಪ್ತಮಿ ಗೌಡ ತನ್ನ ವಿರುದ್ಧ ಅಪಪ್ರಚಾರ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸಪ್ತಗೌಡ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಸಪ್ತಮಿಗೌಡ ಅವರ ಧ್ವನಿಯ ರೀತಿಯಲ್ಲಿಯೇ ಇರುವ ಮಹಿಳೆಯೊಬ್ಬರ ಆಡಿಯೋದಲ್ಲಿ ಕಣ್ಣೀರಿಡುತ್ತಾ, ನನ್ನಿಂದ ಹಲವರಿಗೆ ನೋವಾಗಿದೆ, ನನ್ನದೇನು ತಪ್ಪಿಲ್ಲ, ಗುರು (ಯುವ ಮೂಲ ಹೆಸರು) ಮಾತು ನಂಬಿ ಹಾಗೆ ಮಾಡಿದೆ. ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಬಳಿಕ ನಾನು ಮುಂದುವರಿದೆ. ನಿಮ್ಮ ಸೆಟ್ ನಲ್ಲಿಯೇ ಆಗಿದ್ದು. ಆಗಬಾರದಿತ್ತು. ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಸೈಡ್ ಸ್ಟೋರಿನೂ ಕೇಳಿ. ಸಪ್ತಮಿ ಇಷ್ಟು ಕೆಟ್ಟವಳಾ ಎಂದುಕೊಳ್ಳೊವ ಮೊದಲು ಏನಾಯಿತು ಎಂಬುದನ್ನೂ ಕೇಳಿ ಎಂದಿದ್ದಾಳೆ.
ನಾನು ಮೊದಲಿಂದ ಹೇಳುತ್ತಿದ್ದೆ. ಇದೆಲ್ಲ ವರ್ಕೌಟ್ ಆಗಲ್ಲ. ಅಲ್ಲದೇ ನಾನು ಎಂದಿಗೂ ಸಹ ಫ್ಯಾಮಿಲಿ ಬಿಟ್ಟು ಬಾ, ಪತ್ನಿ ಜೊತೆ ಬ್ರೇಕ್ ಅಪ್ ಮಾಡಿಕೋ ಎಂದು ಹೇಳಿಲ್ಲ ಸರ್ ನನ್ನನ್ನು ನಂಬಿ. ಗುರುಗೆ ಅದು ಮೊದಲ ಸಿನಿಮಾ. ಯಾರಿಗೂ ತೊಂದರೆ ಆಗಬಾರದು. ಬೈಯ್ಯುವುದಾದರೆ ಬೈಯ್ಯಿರಿ. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ ಎಂದು ಆಡಿಯೋದಲ್ಲಿ ಹೇಳಲಾಗಿದೆ.
ಆಡಿಯೋವನ್ನು ಸಪ್ತಮಿಗೌಡ ವಿಜಯ್ ಕಿರಗುಂದೂರು ಅವರಿಗೆ ಕಳೆಹಿಸಿದ್ದಾರೆ ಎನ್ನಲಾಗುತ್ತಿದೆ. ಯುವ ಸಿನಿಮಾ ಸೆಟ್ ನಲ್ಲಿ ಶ್ರೀದೇವಿ ಬಂದು ಜಗಳ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ನಿರ್ಮಾಪಕ ವಿಜಯ್ ಕಿರಗುಂದೂರು ಸಪ್ತಮಿ ಹಾಗೂ ಯುವ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಸಪ್ತಮಿ ವಿಜಯ್ ಕಿರಗಂದೂರು ಅವರಿಗೆ ಈ ಆಡಿಯೋ ಕಳುಹಿಸಿದ್ದಾರೆ ಎನ್ನಲಾಗಿದೆ.