ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುವುದು. ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ 2000ಕ್ಕೂ ಅಧಿಕ ಬಸ್ ಗಳನ್ನು ರಸ್ತೆಗಿಳಿಸಲು ನಾಲ್ಕು ನಿಗಮಗಳು ನಿರ್ಧರಿಸಿವೆ.
ಕೆಎಸ್ಆರ್ಟಿಸಿಯಿಂದ 1750 ಬಸ್, ವಾಯುವ್ಯ ಕರ್ನಾಟಕ 145, ಕಲ್ಯಾಣ ಕರ್ನಾಟಕ 200, ಬಿಎಂಟಿಸಿ 180 ವಿಶೇಷ ಬಸ್ ಗಳನ್ನು ಓಡಿಸಲಿದೆ. ನಾಲ್ಕು ನಿಗಮಗಳಿಂದ 2275 ಬಸ್ ಗಳನ್ನು ಓಡಿಸಲಾಗುವುದು. ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ, ಹೊರ ರಾಜ್ಯಗಳಿಗೆ, ವಿವಿಧೆಡೆಯಿಂದ ಬೆಂಗಳೂರಿಗೆ ಬಸ್ ಗಳು ಸಂಚರಿಸಲಿವೆ. ಮುಂಗಡ ಟಿಕೆಟ್ ಕಾಯ್ದಿರುಸವವರಿಗೆ ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ.