
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸ್ನ್ಯಾಕ್ಸ್ ಆಕರ್ಷಕವಾಗಿ ಕಾಣುವಂತೆ ಮಾಡಲು ವ್ಯಕ್ತಿಯೊಬ್ಬ ಬಟಾಣಿಗೆ ಹಸಿರು ಬಣ್ಣದ ಪುಡಿಯನ್ನು ಮಿಶ್ರಣ ಮಾಡುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿ ದಾಖಲಾಗಿವೆ.
ಹಳದಿ ಕಾಣುವ ಬಟಾಣಿ ಹಸಿರು ಬಣ್ಣಕ್ಕೆ ತಿರುಗಿಸಿದ ನಂತರ, ಆತ ಬಕೆಟ್ ತರಹದ ಪಾತ್ರೆಯಲ್ಲಿ ಹಾಕುವುದನ್ನು ಕಾಣಬಹುದಾಗಿದೆ. ಕಾಳುಗಳು ಬಣ್ಣವನ್ನು ಹೀರಿಕೊಳ್ಳುವ ಸಲುವಾಗಿ ಬಿಸಿಲಿನಲ್ಲಿ ನೆಲದ ಮೇಲೆ ಹಾಕಲಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಇದನ್ನು ಹರಡಲಾಗಿದೆ.
ಅಸ್ಸಾಂನಲ್ಲಿ ಇರುವ ಘಟಕದಲ್ಲಿ ಆಹಾರ ಸಂಸ್ಕರಿಸುವ ವ್ಯಕ್ತಿ ಬಟಾಣಿಗೆ ಉಪ್ಪು ಮತ್ತು ಹಸಿರು ಬಣ್ಣದಿಂದ ಸಂಸ್ಕರಣೆ ಮಾಡುತ್ತಿರುವುದು ಕಂಡುಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರು, ಕೃತಕ ಬಣ್ಣ ಬಳಸಿ ತಿಂಡಿ ತಯಾರಿಸಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ, ಆಹಾರದ ಬಣ್ಣಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಅಂತರ್ಜಾಲದಲ್ಲಿ ಮರುಕಳಿಸುತ್ತಲೇ ಇದೆ, ಜೊತೆಗೆ ಹಲವಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.