ರಾಮನಗರ: ಯಾವುದೇ ಕಾರಣಕ್ಕೂ ನಾವು ಸಿದ್ಧಾಂತದಲ್ಲಿ ರಾಜಿಯಾಗುವುದಿಲ್ಲ ಎಂದು ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.
ರಾಮನಗರ ತಾಲೂಕಿನ ಕೇತಗಾನಹಳ್ಳಿಯ ಹೆಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯೊಂದಿಗೆ ಸೇರಿ ಆಡಳಿತ ಮಾಡಿದ್ದೆವು. ಬಿಜೆಪಿಗೆ ಕುಮಾರಸ್ವಾಮಿ ಬೆಂಬಲ ನೀಡಿದ್ದರು. ಶೋಭಾಯಾತ್ರೆ ವಿಚಾರದಲ್ಲಿ ನಾವು ವಿರೋಧ ಮಾಡಿದ್ದೆವು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷಗಳೆರಡು ಪ್ರಾದೇಶಿಕ ಪಕ್ಷಕ್ಕೆ ಮಾರಕವಾಗಿವೆ. ಕರ್ನಾಟಕಕ್ಕಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿಯಬೇಕು. ರಾಜ್ಯದ ವಿಚಾರವಾಗಿ ನಾವು ಬಿಜೆಪಿ ಜೊತೆ ಹೋಗಲು ಸಿದ್ದರಿದ್ದೇವೆ ಎಂದು ದತ್ತ ಹೇಳಿದ್ದಾರೆ.