ತೆಲಂಗಾಣ: ತೆಲಂಗಾಣ ರಾಜಕೀಯ ಕದನ ರಂಗೇರಿದೆ. ದಿನಕ್ಕೊಂದು ಘಟನೆಗಳು, ದಿನಕ್ಕೊಂದು ಜಿದ್ದಾಜಿದ್ದಿನ ಹೇಳಿಕೆಗಳು ಬರ್ತಾನೆ ಇವೆ. ಇದೀಗ ನಮ್ಮ ಪಾದಯಾತ್ರೆಗೆ ಬನ್ನಿ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಪಂಥಾಹ್ವಾನ ನೀಡಿದ್ದಾರೆ.
ಅಷ್ಟೆ ಅಲ್ಲ ಹೊಸ ಶೂಗಳನ್ನು ತೋರಿಸುವ ಮೂಲಕ ಪಾದಯಾತ್ರೆಗೆ ಬನ್ನಿ ಎಂದು ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಶರ್ಮಿಳಾ, ತೆಲಂಗಾಣದಲ್ಲಿ ಎಷ್ಟು ಸಮಸ್ಯೆ ಇಲ್ಲ. ಸಮಸ್ಯೆಗಳೇ ಇಲ್ಲ ಎಂದಾದರೆ ನಾನು ರಾಜಿನಾಮೆ ಕೊಡ್ತೀನಿ. ಸಮಸ್ಯೆಗಳು ಇವೆ ಎಂದು ಗೊತ್ತಾದರೆ ಕೆಸಿಆರ್ ರಾಜಿನಾಮೆ ಕೊಡಲಿ ಎಂದು ಸವಾಲೆಸೆದರು.
ಈ ಮೂಲಕ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶರ್ಮಿಳಾ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಸರ್ಕಾರ ಅನುಮತಿ ನಿರಾಕರಿಸಿತ್ತು. ಸರ್ಕಾರದ ಈ ನಿರ್ಧಾರದಿಂದ ಶರ್ಮಿಳಾ ಉಪವಾಸ ಸತ್ಯಾಗ್ರಹವನ್ನು ನಡೆಸಲು ಮುಂದಾಗಿದ್ದರು. ಅದರ ಬೆನ್ನಲ್ಲೇ ಕೆಸಿಆರ್ ಗೆ ಶೂ ಕಳುಹಿಸುತ್ತೇವೆ ಪಾದಯಾತ್ರೆಗೆ ಬನ್ನಿ ಎಂದು ಕರೆದಿದ್ದಾರೆ.