alex Certify ಬೈಕ್​ ಸ್ಟಂಟ್​​ ಮಾಡಲು ಹೋಗಿ ಅಪಘಾತಕ್ಕೀಡಾದ ಯುಟ್ಯೂಬರ್​; ಘಟನೆಯ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್​ ಸ್ಟಂಟ್​​ ಮಾಡಲು ಹೋಗಿ ಅಪಘಾತಕ್ಕೀಡಾದ ಯುಟ್ಯೂಬರ್​; ಘಟನೆಯ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತಮಿಳುನಾಡಿನ ಕಾಂಚಿಪುರಂ ಬಳಿಯಲ್ಲಿ ಭಾನುವಾರ ನಡೆದ ಬೈಕ್​ ಸ್ಟಂಟ್​ನಲ್ಲಿ ಮೋಟೋ ವ್ಲಾಗರ್​​ ಕೂಡ ಆಗಿರುವ ಯುಟ್ಯೂಬರ್​ ಟಿಟಿಎಫ್​ ವಾಸನ್​ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ಕಾಂಚಿಪುರಂ ಜಿಲ್ಲೆ ಬಳಿ ಇರುವ ಚೆನ್ನೈ – ಬೆಂಗಳೂರು ಹೆದ್ದಾರಿ ಸರ್ವೀಸ್​ ರಸ್ತೆಯಲ್ಲಿ ಯುಟ್ಯೂಬರ್​ ಬೈಕ್​ ಸ್ಟಂಟ್​ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ಆದರೆ ಬೈಕ್​ ಸ್ಟಂಟ್​ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ್ದು ಪರಿಣಾಮ ವಾಸನ್​ ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಕ್ಲಿಪ್​ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ಸರ್ವೀಸ್​ ರಸ್ತೆಯಲ್ಲಿ ಅತೀವೇಗದ ಬೈಕ್​ ಸ್ಟಂಟ್​ ಮಾಡಲು ಯತ್ನಿಸುತ್ತಿರೋದನ್ನ ಸ್ಪಷ್ಟವಾಗಿ ತೋರಿಸಲಾಗಿದೆ.

ಸರ್ವೀಸ್​​ ರಸ್ತೆಯಲ್ಲಿ ಒಂದು ಬದಿಯಲ್ಲಿ ಜಮೀನು ಇರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಯುಟ್ಯೂಬರ್​​ ಮುಂಭಾಗದ ಟೈರ್​ನ್ನು ಎತ್ತುವ ಮೂಲಕ ಸಾಹಸ ಪ್ರದರ್ಶಿಸಬೇಕು ಎನ್ನುಷ್ಟರಲ್ಲಿ ಅವರು ಸಮತೋಲನ ಕಳೆದುಕೊಂಡಿದ್ದಾರೆ. ಪರಿಣಾಮ ಬೈಕು ಜಮೀನಿಗೆ ನುಗ್ಗಿದೆ.

ಘಟನೆಯ ವಿಡಿಯೋದಲ್ಲಿ ಸರ್ವೀಸ್​ ರಸ್ತೆಯಲ್ಲಿ ಅತೀವೇಗದ ಬೈಕ್​ ಸ್ಟಂಟ್​ ಮಾಡಲು ವಾಸನ್​ ಯತ್ನಿಸುತ್ತಿರೋದು ಸ್ಪಷ್ಟವಾಗಿದೆ. ಯುಟ್ಯೂಬರ್​ ಬೈಕ್​ ಸಮೇತ ಗದ್ದೆಗೆ ಹಾರಿದ ಬಳಿಕವೂ ಹೊಲದಲ್ಲಿ ಬೈಕ್​ ಮುಂದೆ ಹೋಗಿದೆ. ಈ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...