
ಫುಲೆರಾ-ಅಜ್ಮೀರ್ ವಿಭಾಗದ ದಂತ್ರಾ ನಿಲ್ದಾಣದ ಬಳಿ ಚಿತ್ರೀಕರಿಸಿದ ವಿಡಿಯೋವು ರೈಲ್ವೇ ಹಳಿಯ ಮಧ್ಯದಲ್ಲಿ ಗುಳಿಗೆಗಳ ರೂಪದಲ್ಲಿ ಪಟಾಕಿ ಹೊತ್ತಿಸಲಾಗಿದೆ. ಇದರಿಂದ ದಟ್ಟವಾದ ಹೊಗೆ ಹೊರಹೊಮ್ಮಿದೆ. ದುಷ್ಕರ್ಮಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ರೈಲ್ವೇ ಸಂರಕ್ಷಣಾ ಪಡೆಯ ವಾಯುವ್ಯ ರೈಲ್ವೆ ವಿಭಾಗವು ಯೂಟ್ಯೂಬರ್‌ಗಾಗಿ ಹುಡುಕಾಟ ನಡೆಸುತ್ತಿದೆ.
ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ, ಕಿರು ವಿಡಿಯೋಗಳ ಜನಪ್ರಿಯತೆ ಗಗನಕ್ಕೇರಿದೆ. ಪ್ರತಿದಿನ, ಲೆಕ್ಕವಿಲ್ಲದಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರು ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಫೇಸ್ಬುಕ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ವಿಡಿಯೋಗಳಿಗಾಗಿ ಹೆಚ್ಚಿನ ವೀಕ್ಷಣೆ, ಲೈಕ್ಸ್ ಗಳಿಸಲು ಬಳಕೆದಾರರು ವಿಭಿನ್ನ ಪರಿಕಲ್ಪನೆಗಳನ್ನು ಹುಡುಕುತ್ತಾರೆ. ಕೆಲವೊಮ್ಮೆ ಇದು ಜೀವಕ್ಕೆ ಅಪಾಯವಾಗುವಂತಹ ಸನ್ನಿವೇಶಗಳು ಕೂಡ ನಿರ್ಮಾಣವಾಗುತ್ತದೆ.
ಸೆಲ್ಫಿ ತೆಗೆದುಕೊಳ್ಳಲು ಅಥವಾ ವಿಡಿಯೋಗಳನ್ನು ರೆಕಾರ್ಡ್ ಮಾಡಲು ರೈಲ್ವೇ ಹಳಿಗಳ ಮೇಲೆ ಕೆಲವರು ಅಪಾಯಕಾರಿ ಸಾಹಸ ಮಾಡಲು ಮುಂದಾಗಿರುವುದನ್ನು ನೋಡಿರಬಹುದು. ಇದರಿಂದ ಅದೆಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಯೂಟ್ಯೂಬರ್ ರೈಲ್ವೇ ಹಳಿ ಮೇಲೆ ಪಟಾಕಿ ಹೊತ್ತಿಸಿರುವುದು ಕೂಡ ಅಪರಾಧವಾಗಿದೆ.
ರೈಲ್ವೆ ಹಳಿಗಳ ಮೇಲೆ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ವಿಡಿಯೋ ಮಾಡಲು ಈ ರೀತಿ ವರ್ತಿಸುವುದು ಒಬ್ಬರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಮಾತ್ರವಲ್ಲದೆ, ಇದು ಜೈಲು ಶಿಕ್ಷೆಗೆ ಕಾರಣವಾಗುವ ಕ್ರಿಮಿನಲ್ ಅಪರಾಧವಾಗಿದೆ.
1989ರ ರೈಲ್ವೇ ಕಾಯಿದೆಯ ಅಡಿಯಲ್ಲಿ, ನಿರ್ದಿಷ್ಟವಾಗಿ ಸೆಕ್ಷನ್ 145 ಮತ್ತು 147, ರೈಲ್ವೇ ಹಳಿಗಳು ಅಥವಾ ಪ್ಲಾಟ್‌ಫಾರ್ಮ್‌ಗಳ ಪಕ್ಕದಲ್ಲಿ ಸೆಲ್ಫಿಗಳನ್ನು ಸೆರೆಹಿಡಿಯುವುದು ಅಥವಾ ವಿಡಿಯೋಗಳನ್ನು ರೆಕಾರ್ಡ್ ಮಾಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಕಾನೂನನ್ನು ಉಲ್ಲಂಘಿಸಿದರೆ ರೂ. 1000 ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು.