alex Certify ಐಫೋನ್​ 14ರ ಕ್ರಾಶ್​ ಡಿಟೆಕ್ಷನ್​ ವೈಶಿಷ್ಟ್ಯ ಪರೀಕ್ಷಿಸಲು ಕಾರು ಅಪಘಾತ ನಡೆಸಿದ ಯೂಟ್ಯೂಬರ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಫೋನ್​ 14ರ ಕ್ರಾಶ್​ ಡಿಟೆಕ್ಷನ್​ ವೈಶಿಷ್ಟ್ಯ ಪರೀಕ್ಷಿಸಲು ಕಾರು ಅಪಘಾತ ನಡೆಸಿದ ಯೂಟ್ಯೂಬರ್​….!

ಮೊಬೈಲ್​ ಉತ್ಪಾದಕ ಕಂಪನಿ ಆಪಲ್​ ಈ ತಿಂಗಳ ಆರಂಭದಲ್ಲಿ ತನ್ಮ ಪ್ರಮುಖ ಉತ್ಪನ್ನದ ಹೊಸ ಸೀರೀಸ್​ ಬಿಡುಗಡೆ ಮಾಡಿ ಜಗತ್ತಿನ ಗಮನ ಸೆಳೆದಿದೆ.
ಐಫೋನ್​ 14ಅನ್ನು ಅನಾವರಣಗೊಳಿಸಿದ್ದು, ಅದು ಅನೇಕ ಹೊಸ ನಾವೀನ್ಯ ಫೀಚರ್​ ಒಳಗೊಂಡಿದೆ. ಇದರಲ್ಲಿ ಕ್ರಾಶ್​ ಡಿಟೆಕ್ಷನ್​ ಎಂಬ ಈ ಹೊಸ ವೆೈಶಿಷ್ಟ್ಯದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.

ಈ ಹೊಸ ವೈಶಿಷ್ಟ್ಯವು ತೀವ್ರವಾದ ಕಾರ್​ ಕ್ರಾಶ್​ ಪತ್ತೆಹಚ್ಚಲು ಫೋನ್​ಗೆ ಅನುಮತಿಸುತ್ತದೆ ಮತ್ತು ಕಾಂಟ್ಯಾಕ್ಟ್​ಗಳಿಗೆ ಸಂದೇಶ ಕಳಿಸುವುದು, ತುರ್ತು ಸೇವೆಗಳಿಗೆ ಸ್ವಯಂಚಾಲಿತವಾಗಿ ಸಂಪರ್ಕಿಸುತ್ತದೆ.

ಈ ವೈಶಿಷ್ಟ್ಯವನ್ನು ಪರೀಕ್ಷಿಸಲು ಯೂಟ್ಯೂಬರ್​ ಪ್ರಯೋಗ ಮಾಡಿದ್ದಾರೆ. ಟೆಕ್​ ರಾಕ್ಸ್​ ಹೆಸರಿನ ಚಾನಲ್​ನ ಯೂ ಟ್ಯೂಬರ್​ ಐ ಫೋನ್​ 14ನ ಕ್ರಾಶ್​ ಡಿಟೆಕ್ಷನ್​ ವೈಶಿಷ್ಟ್ಯವನ್ನು ಪರೀಕ್ಷಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿ ವ್ಯಕ್ತಿಯು 2005 ರ ಮರ್ಕ್ಯುರಿ ಗ್ರಾಂಡ್ ಮಾಕ್ವಿರ್ಸ್​ ಸೆಡಾನ್​ನ ಮುಂಭಾಗದ ಸೀಟಿನ ಹೆಡ್​ರೆಸ್ಟ್​ಗೆ ಹೊಚ್ಚ ಹೊಸ ಐಫೊನ್​ 14 ಪ್ರೊ ಅನ್ನು ಕಟ್ಟುತ್ತಿರುವುದನ್ನು ಕಾಣಬಹುದು. ಯೂಟ್ಯೂಬರ್​ ರಿಮೋಟ್​ ನಿಯಂತ್ರಿತ ಕಾರನ್ನು ಹಳೆಯ ವಾಹನಗಳ ರಾಶಿಗೆ ಅಪ್ಪಳಿಸುತ್ತಾನೆ.

ಸರಿಸುಮಾರು 10 ಸೆಕೆಂಡುಗಳಲ್ಲಿ ಫೋನ್​ ಎಸ್​ಒಎಸ್​ ಮೋಡ್​ ಸಕ್ರಿಯವಾಯಿತು ಮತ್ತು ತುರ್ತು ಸೇವೆಗಳೊಂದಿಗೆ ಫೋನ್​ ಅನ್ನು ಸಂಪಕಿರ್ಸುವ ಮೊದಲು 20-ಸೆಕೆಂಡ್​ ಕೌಂಟ್​ಡೌನ್​ ಅನ್ನು ಪ್ರದರ್ಶಿಸಿತು. ಯೂಟ್ಯೂಬರ್​ ಅದನ್ನು ಒಮ್ಮೆ ಅಲ್ಲ, ಎರಡು ಬಾರಿ ಮಾಡಿದರು.

ಈ ವೈಶಿಷ್ಟ್ಯವನ್ನು ಒಮ್ಮೆ ಸಕ್ರಿಯಗೊಳಿಸಿದರೆ, ಕಾರ್​ ಕ್ರಾಶ್​ ಆದ ಸಂದರ್ಭದಲ್ಲಿ ಅಕ್ಷಾಂಶ ರೇಖಾಂಶ ಸಹಿತ ಮಾಹಿತಿಯನ್ನು ಸಂಬಂಧಪಟ್ಟವರಿಗೆ ಕಳಿಸುತ್ತದೆ.

ಫೋನ್​ ಆಡಿಯೊ ಸಂದೇಶವನ್ನು ಕಳುಹಿಸುತ್ತದೆ ಮತ್ತು ಅಪಘಾತದ ಬಗ್ಗೆ ತುರ್ತು ಸೇವೆಗಳಿಗೆ ತಿಳಿಸುತ್ತದೆ. ಐಫೋನ್​ 14 ಪ್ರೋ, ಬಾರೋಮೀಟರ್​, ಹೈಡೈನಾಮಿಕ್​ ರೇಂಜ್​ ಗೈರೊಸ್ಕೋಪ್​, ಬಾರೋಮೀಟರ್​ ಮತ್ತು ಮೈಕ್ರೊಫೋನ್​, ಸುಧಾರಿತ ಚಲನೆಯ ಅಲ್ಗಾರಿದಮ್​ನೊಂದಿಗೆ ಸಂಯೋಜಿಸಲ್ಪಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...