ಬರೋಬ್ಬರಿ 397 ದಿನಗಳ ನಂತರ ತನ್ನ ಪತ್ನಿಯನ್ನು ನೇಪಾಳದಲ್ಲಿ ಭೇಟಿಯಾದ ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾರ್ಲ್ ರಾಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೂಟ್ಯೂಬರ್ ಕಾರ್ಲ್ ಎಡ್ವರ್ಡ್ ರೈಸ್ ಅವರಿಗೆ ಭಾರತಕ್ಕೆ ಪ್ರವೇಶ ನಿಷೇಧಿಸಿದೆ. ಹೀಗಾಗಿ ಸಾಕಷ್ಟು ತೊಳಲಾಟಗಳ ಮಧ್ಯೆ ಅವರು ತಮ್ಮ ಪತ್ನಿಯನ್ನು ನೇಪಾಳದಲ್ಲಿ ಭೇಟಿಯಾಗಿದ್ದಾರೆ.
ಶಾಲೆ ಹೊರಗೆ ಕೇವಲ 30 ಸೆಕೆಂಡು ಕಾರು ನಿಲ್ಲಿಸಿದ್ದ ಮಹಿಳೆಗೆ 7,000 ರೂ. ದಂಡ..!
ಗಂಡ-ಹೆಂಡತಿಯ ಪುನರ್ಮಿಲನದ ದೃಶ್ಯವನ್ನು ಅವರು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ಭಾರತ ಸರ್ಕಾರವು ತನ್ನನ್ನು ಕಪ್ಪುಪಟ್ಟಿಗೆ ಸೇರಿಸಿರುವುದರಿಂದ ಭಾರತಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋದಲ್ಲಿ ಅವರು ವಿವರಿಸಿದ್ದಾರೆ. ಇದೀಗ ಅಂತಿಮವಾಗಿ 397 ದಿನಗಳ ನಂತರ ಕಾರ್ಲ್ ತನ್ನ ಮಡದಿಯನ್ನು ಭೇಟಿಯಾದ ಸಂತೋಷದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಅವರು ಇಷ್ಟು ಸಮಯದ ನಂತರ ತನ್ನ ಹೆಂಡತಿಯನ್ನು ಹೇಗೆ ಭೇಟಿಯಾದರು ಎಂಬುದನ್ನು ತೋರಿಸಿದ್ದಾರೆ. ದಂಪತಿಗಳ ಪುನರ್ಮಿಲನವು ತುಂಬಾ ಭಾವನಾತ್ಮಕವಾಗಿತ್ತು. ಏಕೆಂದರೆ ಇಬ್ಬರೂ ನೇಪಾಳದಲ್ಲಿ ಭೇಟಿಯಾದಾಗ ಅವರ ಸಂತೋಷವನ್ನು ತಡೆಯಲು ಸಾಧ್ಯವಾಗಲಿಲ್ಲ.
90ರ ದಶಕದ ಐಕಾನಿಕ್ ಕ್ಯಾಡ್ಬರಿ ಜಾಹೀರಾತನ್ನು ಮರುಸೃಷ್ಟಿಸಿದ ಬಾಲಕ: ವಿಡಿಯೋ ವೈರಲ್
ಕಾರ್ಲ್ ತಮ್ಮ ಪತ್ನಿಗಾಗಿ ಕಾಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಮಾನ ನಿಲ್ದಾಣದಿಂದ ಹೊರಗೆ ಪತ್ನಿ ಮನೀಷಾ ಬರುತ್ತಿದ್ದಂತೆ ಕಾರ್ಲ್ ಆಕೆಯ ಬಳಿ ಓಡಿದ್ದಾನೆ. ಇಬ್ಬರೂ ಪರಸ್ಪರ ಅಪ್ಪಿಕೊಂಡು, ಮುದ್ದಾಡಿದ್ದಾರೆ. ನಂತರ ಪರಸ್ಪರರ ಜೊತೆಯಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ.
ನ್ಯೂಜಿಲೆಂಡ್ ಮೂಲದ ಕಾರ್ಲ್, 2020 ರ ಅಕ್ಟೋಬರ್‌ನಲ್ಲಿ ದುಬೈ ಮತ್ತು ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತವನ್ನು ತೊರೆದಿದ್ದರು. ಹೊರಡುವಾಗ, ಅವರ ವೀಸಾವನ್ನು ವಿಮಾನ ನಿಲ್ದಾಣದಲ್ಲಿ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಕಾರ್ಲ್ ದುಬೈನಲ್ಲಿದ್ದಾಗ ಹೊಸ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದಾಗ, ಹೊಸ ವೀಸಾವನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಕಾರ್ಲ್ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಭಾರತ ಸರ್ಕಾರ ಹೇಳಿದೆ.