ಯುಟ್ಯೂಬ್ ಪ್ರೀಮಿಯಂ ಅನೇಕ ದೇಶಗಳಲ್ಲಿ ದುಬಾರಿಯಾಗಲಿದೆ. ಅಧಿಕೃತ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಚಂದಾದಾರರಿಂದ ಆದಾಯವನ್ನು ಹೆಚ್ಚಿಸಲು ಗೂಗಲ್ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತು ಬ್ಲಾಕರ್‌ಗಳನ್ನು ನಿಷೇಧಿಸಲು ಪ್ರಾರಂಭಿಸಿದೆ. ಕಂಪನಿಯು ಅನೇಕ ದೇಶಗಳಲ್ಲಿ ತನ್ನ ಪ್ರೀಮಿಯಂ ಚಂದಾದಾರಿಕೆಯನ್ನು ಹೆಚ್ಚಿಸಲು ಶುರು ಮಾಡಿದೆ.
ಈಗಾಗಲೇ ಪ್ರೀಮಿಯಂ ಚಂದಾದಾರಿಕೆ ಪಡೆದ ಜನರಿಗೆ ಯುಟ್ಯೂಬ್ ಮೂರು ತಿಂಗಳ ಗ್ರೇಸ್ ಪಿರಿಯಡ್ ನೀಡಿದೆ. ಅದ್ರ ನಂತ್ರ ತಿಂಗಳ ಚಂದಾದಾರಿಕೆ ಪಡೆಯಬೇಕಾಗುತ್ತದೆ. ಪ್ರೀಮಿಯಂ ಚಂದಾದಾರರಿಗೆ ಕಂಪನಿ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಕಂಪನಿಯು ವೀಡಿಯೊಗಳಲ್ಲಿ ಜಾಹೀರಾತು ಮುಕ್ತ ಸೌಲಭ್ಯವಲ್ಲದೆ ಇನ್ನೂ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಯುಟ್ಯೂಬ್ ಮೂಜಿಕ್, ಬ್ಯಾಗ್ರೌಂಡ್ ಮ್ಯೂಸಿಕ್, ಫುಲ್ ಹೆಚ್ ಡಿ ವಿಡಿಯೋ ಸ್ಟ್ರೀಮಿಂಗ್ ಸೌಲಭ್ಯ ಸಿಗುತ್ತದೆ. ಯುಟ್ಯೂಬ್ ಪ್ರೀಮಿಯಂ ಬೆಲೆಯನ್ನು ಏರಿಕೆ ಮಾಡೋದಾಗಿ ಏಳು ದೇಶದ ಗ್ರಾಹಕರಿಗೆ ಈಗಾಗಲೇ ಸಂದೇಶ ರವಾನೆಯಾಗಿದೆ ಎಂಬ ಮಾಹಿತಿ ಇದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಚಿಲಿ, ಜರ್ಮನಿ, ಪೋಲೆಂಡ್ ಮತ್ತು ಟರ್ಕಿ ದೇಶಗಳಲ್ಲಿ ಬೆಲೆ ಏರಿಕೆಯಾಗಿದೆ.
ಹಿಂದಿನ ಚಂದಾದಾರರಿಗೆ ಬೆಲೆ ಏರಿಕೆ ಬಿಸಿ ಈಗ್ಲೇ ತಟ್ಟೋದಿಲ್ಲ. ಇದು ಹೊಸಬರಿಗೆ ಮಾತ್ರ. ಭಾರತದಲ್ಲಿ ಯುಟ್ಯೂಬ್ ಪ್ರೀಮಿಯಂ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಇದ್ರ ಆರಂಭಿಕ ಬೆಲೆ 129 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಇದು ಟ್ರಾಯಲ್ ಸಮಯವಾಗಿದ್ದು ನಂತ್ರ 139 ರೂಪಾಯಿ ಪಾವತಿ ಮಾಡ್ಬೇಕು.