ಯೂಟ್ಯೂಬ್ ತನ್ನ ಬಳಕೆದಾರರಿಗಾಗಿ ಅನೇಕ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿದೆ. ಈಗ ಮತ್ತೊಂದು ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದಕ್ಕೆ ಸೂಪರ್ ಥ್ಯಾಂಕ್ಸ್ ಎಂದು ಹೆಸರಿಟ್ಟಿದೆ. ಈ ಹೊಸ ವೈಶಿಷ್ಟ್ಯದ ಮೂಲಕ ಯೂಟ್ಯೂಬರ್ಸ್ ಹೆಚ್ಚು ಗಳಿಸಬಹುದಾಗಿದೆ. ಈ ವೈಶಿಷ್ಟ, ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಕಠಿಣ ಸ್ಪರ್ಧೆ ನೀಡಲಿದೆ.
ಸೂಪರ್ ಥ್ಯಾಂಕ್ಸ್ ವೈಶಿಷ್ಟ್ಯದ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ಯೂಟ್ಯೂಬ್ ಚಾನೆಲ್ ಗೆ 2 ಡಾಲರ್ ನಿಂದ ಹಿಡಿದು 50 ಡಾಲರ್ ವರೆಗೆ ಹಣ ನೀಡಬಹುದಾಗಿದೆ. ಹಣ ಪಾವತಿ ಮಾಡಿದ ನಂತ್ರ ಬಳಕೆದಾರರು ಕಮೆಂಟ್ ನಲ್ಲಿ ಇದನ್ನು ಹೈಲೈಟ್ ಮಾಡಬಹುದು. ಆಗ ಯಾರು, ಎಷ್ಟು ಹಣ ನೀಡಿದ್ದಾರೆ ಎಂಬುದು ಯೂಟ್ಯೂಬ್ ಗಳಿಗೆ ತಿಳಿಯಲಿದೆ.
ಸೂಪರ್ ಥ್ಯಾಂಕ್ಸ್ ವೈಶಿಷ್ಟ್ಯ ಸದ್ಯ 68 ದೇಶಗಳಲ್ಲಿ ಲಭ್ಯವಿದೆ. ಈ ಫೀಚರ್ ಡೆಸ್ಕ್ ಟಾಪ್ ಹಾಗೂ ಮೊಬೈಲ್ ನಲ್ಲಿ ಲಭ್ಯವಿದೆ. ಆಂಡ್ರಾಯ್ಡ್ ಹಾಗೂ ಐಒಎಸ್ ಎರಡರಲ್ಲೂ ಇದು ಲಭ್ಯವಿದೆ. ಇದಕ್ಕೂ ಷರತ್ತಿದೆ. ಎಲ್ಲ ವಿಡಿಯೋಗಳಿಗೆ ಇದು ಲಭ್ಯವಿರುವುದಿಲ್ಲ. ಪಟ್ಟಿ ಮಾಡಿದ ವರ್ಗ, ವಯಸ್ಸಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.