ಮೈಕ್ರೋಸಾಫ್ಟ್ ಕ್ಲೌಡ್ ಬಳಿಕ ಇದೀಗ ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಸಮಸ್ಯೆ ಎದುರಾಗಿದ್ದು, ವಿಡಿಯೋ ಅಪ್ ಲೋಡ್ ಮಾಡಲಾಗದೇ ಬಳಕೆದಾರರು ಪರದಾಟ ನಡೆಸಿದ್ದಾರೆ.
ವೀಡಿಯೊ ಹಂಚಿಕೆ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಏಕಾಏಕಿ ಸಮಸ್ಯೆಯುಂಟಾಗಿದ್ದು, ಹಲವರು ವಿಡಿಯೋ ಅಪ್ ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಮೈಕ್ರೋಸಾಫ್ಟ್/ಕ್ರೌಡ್‌ಸ್ಟ್ರೈಕ್ ವೈಫಲ್ಯದ ನಂತರ ಇದೀಗ ಯೂಟ್ಯೂಬ್ ಡೌನ್ ಆರಂಭವಾಗಿದ್ದು, ಇಂಟರ್ನೆಟ್ ಬಳಕೆದಾರರು ತಮ್ಮ ವಿಡಿಯೋ ಅಪ್ ಲೋಡ್ ಮಾಡಲಾಗುತ್ತಿಲ್ಲ. ಶೇರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಪಂಚದಾದ್ಯಂತ ಯೂಟ್ಯೂಬ್ ವೇದಿಕೆ ಡೌನ್ ಆಗಿದೆ ಎಂದು ಹಲವರು ದೂರಿದ್ದಾರೆ.
ಬಳಕೆದಾರರ ದೂರುಗಳಿಗೆ ಪ್ರತಿಕ್ರಿಯಿಸಿರುವ ಯೂಟ್ಯೂಬ್, ಸಮಸ್ಯೆಗಳನ್ನು ಶೀಘ್ರವೇ ಪರಿಶೀಲಿಸಿ, ಸರಿಪಡಿಸುವುದಾಗಿ ತಿಳಿಸಿದೆ.