ಜಗತ್ತಿನ ತುಂಬ ವಿಡಿಯೋ ಕ್ರಿಯೇಟರ್ಸ್ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ತಾವಿದ್ದಲ್ಲಿಂದಲೇ ವಿಡಿಯೋ ಮಾಡಿ ಜಗತ್ತಿನ ಮುಂದೆ ಅನಾವರಣ ಮಾಡುವವರು ನಮ್ಮ ನಡುವೆಯೂ ಇದ್ದಾರೆ.
ಇಂತವರಿಗೆ ಯೂಟ್ಯೂಬ್ ಖುಷಿ ಸುದ್ದಿ ನೀಡಿದೆ. ವಿಡಿಯೋ ಕ್ರಿಯೇಟರ್ಗಳು ಹಣ ಗಳಿಸುವ ಹೊಸ ದಾರಿ ಯಾವುದು, ಹೇಗೆ ಎಂದು ಮಂಗಳವಾರ ಪರಿಚಯಿಸಿದೆ.
ಆಲ್ಫಾಬೆಟ್ ಇಂಕ್ ಸ್ಟ್ರೀಮಿಂಗ್ ಸೇವೆಯು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿರುವ ಕಾರಣ, ಸೂಪರ್ ಥ್ಯಾಂಕ್ಸ್ ಎಂಬ ವೈಶಿಷ್ಟ್ಯದ ಮೂಲಕ ವೀಡಿಯೊ ಸೃಷ್ಟಿಸುವವರಿಗೆ ಹಣ ಗಳಿಸುವ ಹೊಸ ಮಾರ್ಗವನ್ನು ಪ್ರಾರಂಭಿಸಿದೆ.
BIG NEWS: ಸಿಎಂ ಬದಲಾವಣೆಯಾದರೆ ಪಕ್ಷಕ್ಕೆ ತೊಂದರೆ; ಮತ್ತೆ ಎಚ್ಚರಿಕೆ ನೀಡಿದ ಮಠಾಧೀಶರು
ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಂತಹ ಪ್ಲಾಟ್ಫಾರ್ಮ್ಗಳು ವೈರಲ್ ವೀಡಿಯೊಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಅದೇ ರೀತಿ ಯೂಟ್ಯೂಬರ್ಗಳು ತಮ್ಮ ವೀಕ್ಷಕರಿಂದ ಹಣ ಗಳಿಸುವ ನಾಲ್ಕನೇ ಮಾರ್ಗ ಕಂಡುಕೊಡಲಾಗಿದೆ.
ವಿಡಿಯೋ ನೋಡಿದ ಬಳಿಕ ಯೂಟ್ಯೂಬರ್ಗೆ ಕೃತಜ್ಞತೆ ವ್ಯಕ್ತಪಡಿಸಲು ಮತ್ತು ತಮ್ಮ ನೆಚ್ಚಿನ ಯೂಟ್ಯೂಬ್ ಚಾನೆಲ್ಗಳನ್ನು ಬೆಂಬಲಿಸಲು ಅಭಿಮಾನಿಗಳು 2 ಡಾಲರ್ನಿಂದ 50 ಡಾಲರ್ ವರೆಗೆ ನಾಲ್ಕು ಪ್ರೈಸ್ ಪಾಯಿಂಟ್ ರೂಪದಲ್ಲಿ ‘ಸೂಪರ್ ಧನ್ಯವಾದ’ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.
ವಿಡಿಯೊ ಪುಟದಲ್ಲಿ ಪಾಯಿಂಟ್ ಖರೀದಿಸಿದ ನಂತರ ಕಾಮೆಂಟ್ ವಿಭಾಗದಲ್ಲಿ ಹೈಲೈಟ್ ಮಾಡಿದ ಕಾಮೆಂಟ್ ಕಾಣಿಸುತ್ತದೆ. ಇದು ಅಭಿಮಾನಿಗಳ ಉಡುಗೊರೆಗೆ ಪ್ರತಿಕ್ರಿಯಿಸಲು ವಿಡಿಯೋ ಕ್ರಿಯೇಟರ್ಗಳಿಗೆ ಅವಕಾಶ ಮಾಡಿಕೊಡುತ್ತದೆ. ಈ ಫೀಚರ್ 68 ದೇಶಗಳಲ್ಲಿನ ವಿಡಿಯೋ ಕ್ರಿಯೇಟರ್ಗಳಿಗೆ ಲಭ್ಯವಿದೆ.
ಪಾವತಿ ಮಾಡಿ ಚಾನೆಲ್ ಸದಸ್ಯತ್ವ ಪಡೆಯಲೂ ಸಹ ಅವಕಾಶ ಮಾಡಿಕೊಡಲಾಗಿದೆ. ಲೈವ್ಸ್ಟ್ರೀಮ್ ಮಾಡಿದ ಯೂಟ್ಯೂಬ್ ವಿಡಿಯೊದಲ್ಲಿ ವೀಕ್ಷಕರು ತಮ್ಮ ಕಾಮೆಂಟ್ಗಳನ್ನು ಕಾಮೆಂಟ್ ವಿಭಾಗದ ಮೇಲ್ಭಾಗಕ್ಕೆ ಪಿನ್ ಮಾಡಲು ಪಾವತಿಸಲೂಬಹುದು.