
ಬೆಂಗಳೂರು: ಕೆನರಾ ಬ್ಯಾಂಕ್ ವತಿಯಿಂದ ನಿರುದ್ಯೋಗಿ ಯುವಕರು, ಯುವತಿಯರಿಗೆ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್ ಹಾರ್ಡ್ವೇರ್, ನೆಟ್ವರ್ಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ಜನವರಿ 1ರಿಂದ ಮೂರು ತಿಂಗಳ ಕಾಲ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ. ಪಾಸ್ ಆಗಿರಬೇಕು. ಪಿಯುಸಿ, ಪದವಿ, ಡಿಪ್ಲೋಮಾ ಹೊಂದಿದವರಿಗೆ ಆದ್ಯತೆ ನೀಡಲಿದ್ದು, ಕನಿಷ್ಠ 18ರಿಂದ 27 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ, ವರ್ಗದವರಿಗೆ ಗರಿಷ್ಠ ವಯೋಮಿತಿ ಮಿತಿ 30 ವರ್ಷ ಆಗಿರುತ್ತದೆ. ಆಸಕ್ತರು ಪ್ರತಿ ದಿನ ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರದ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆಯುವ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, ಮಲ್ಲೇಶ್ವರ, ಬೆಂಗಳೂರು. ದೂರವಾಣಿ 080 2344 0036, 2346 3580 ಸಂಪರ್ಕಿಸಬಹುದು.