ಬೆಳಗಾವಿ: ಬೆಳಗಾವಿಯಲ್ಲಿ ಈದ್ ಮೆರವಣಿಗೆಯ ನಂತರ ಯುವಕರು ಗಲಾಟೆ ಮಾಡಿಕೊಂಡಿದ್ದು, ಕ್ಷುಲ್ಲಕ ವಿಚಾರಕ್ಕೆ ತಲ್ವಾರ್ ನಿಂದ ಹೊಡೆದಾಡಿಕೊಂಡಿದ್ದಾರೆ.
ಬೆಳಗಾವಿಯ ರುಕ್ಮಿಣಿ ನಗರದ ಯುವಕರು ಉಜ್ವಲ ನಗರದ ನಾಲ್ವರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾರೆ. ಮೊಹಮ್ಮದ್ ಕೈಫ್, ಸಾಹಿಲ್ ಬಂಡಾರಿ, ತನ್ವೀರ್, ಅಹಂ ಅಂಡರ್ ಎಂಬುವರಿಂದ ನಾಲ್ವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಬೆಳಗಾವಿಯ ರುಕ್ಮಿಣಿ ನಗರದ ಯುವಕರಿಂದ ಅಟ್ಟಾಡಿಸಿ ಹಲ್ಲೆ ನಡೆದಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಉಜ್ವಲ್ ನಗರದಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಬೆಳಗ್ಗೆ ಲೈಟ್ ಗಳನ್ನು ರುಕ್ಮಿಣಿ ನಗರದ ಯುವಕರು ಹಾನಿ ಮಾಡಿದ್ದರು. ಹಾನಿಯಾದ ಲೈಟುಗಳ ಹಣ ಕೇಳಲು ಯುವಕರು ಹೋಗಿದ್ದ ವೇಳೆ ಮಾತಿಗೆ ಮಾತು ಬೆಳೆದು ಯುವಕರು ದಾಳಿ ನಡೆಸಿದ್ದಾರೆ.
ತಲ್ವಾರ್, ಚಾಕುವಿನಿಂದ ಯುವಕರಿಂದ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಯುವಕರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಬಳಿ 50ಕ್ಕೂ ಹೆಚ್ಚು ಯುವಕರು ಜಮಾವಣೆಗೊಂಡಿದ್ದಾರೆ. ಯುವಕರ ಗುಂಪುಗಳನ್ನು ಪೊಲೀಸ್ ಸಿಬ್ಬಂದಿ ಚದುರಿಸಿದ್ದಾರೆ. ಎಪಿಎಂಸಿ ಪೊಲೀಸರು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.