ತ್ರಿಶೂರ್: ಕೇರಳದ ಲಾಡ್ಜ್ ನಲ್ಲಿ ಯುವಕ, ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ನೇಣು ಹಾಕಿಕೊಳ್ಳುವ ಮುನ್ನ ಅವರು ವಿಷ ಸೇವಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಗುರುವಾರ ತ್ರಿಶೂರ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್ ನಲ್ಲಿ ಯುವಕ ಮತ್ತು ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಒಳರಿಕ್ಕರದ ರಿಜೋ(26) ಮತ್ತು ಕಾರ್ಯಾಟ್ಟುಕರದ ಸಂಗೀತಾ(26) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಲಾಡ್ಜ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಿಜೋ ಅವರು ಸಂಗೀತಾ ಅವರ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಬುಧವಾರ ಮಧ್ಯಾಹ್ನ ರಿಜೋ ಮತ್ತು ಸಂಗೀತಾ ಲಾಡ್ಜ್ ಗೆ ಬಂದಿದ್ದಾರೆ. ಸಂಗೀತಾ ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಸಂಗೀತಾ ಅವರ ಮೊಬೈಲ್ ಫೋನ್ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿದರು. ನಂತರ ಆ ಪ್ರದೇಶದ ಹೋಟೆಲ್ ಗಳು ಮತ್ತು ಲಾಡ್ಜ್ ಗಳಲ್ಲಿ ಹುಡುಕಾಟ ನಡೆಸಿದಾಗ ಅವರ ಶವಗಳು ಪತ್ತೆಯಾಗಿವೆ.
ನೇಣು ಹಾಕಿಕೊಳ್ಳುವ ಮುನ್ನ ಇಬ್ಬರೂ ವಿಷ ಸೇವಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಂಗೀತಾ ಅವರಿಗೆ ಮೂವರು ಮಕ್ಕಳಿದ್ದರು. ರಿಜೋ ಮತ್ತು ಸಂಗೀತಾ ಬಾಲ್ಯದ ಗೆಳೆಯರು ಎಂದು ಮೂಲಗಳು ತಿಳಿಸಿವೆ. ರಿಜೋ ಅವಿವಾಹಿತನಾಗಿದ್ದಾನೆ.