ಸಣ್ಣ ವಯಸ್ಸಿನಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಲು ನಾವು ಸೇವಿಸುವ ಆಹಾರ ಮತ್ತು ಲೈಫ್ ಸ್ಟೈಲ್ ಕಾರಣ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ಯುವ ಜನಾಂಗ ಹೆಚ್ಚಿನ ಒತ್ತಡ ಎದುರಿಸುತ್ತಾರೆ. ಇದನ್ನು ಜಾಣ್ಮೆಯಿಂದ ನಿಭಾಯಿಸಲು ಸಾಧ್ಯವಾಗದವರಿಗೆ ಬಲು ಬೇಗ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದಿದೆ ಈ ಅಧ್ಯಯನ.
ವಿಪರೀತ ಒತ್ತಡ ಸಹಿಸಲಾಗದೆ ಜನ ಸ್ಮೋಕಿಂಗ್ ನಂಥ ವ್ಯಸನಗಳ ದಾಸರಾಗುತ್ತಾರೆ. ಧೂಮಪಾನ ಮಾಡುವುದು ಚಟವಾಗುತ್ತಲೇ ರೋಗಗಳೂ ಅಂಟಿಕೊಳ್ಳುತ್ತವೆ. ಸಿಗರೇಟ್ ಸೇದುವವರು ಎಂಟು ಪಟ್ಟು ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾರೆ ಎನ್ನಲಾಗಿದೆ.
ವಿಪರೀತ ಜಂಕ್ ಫುಡ್ ಸೇವನೆ, ಆಹಾರದಲ್ಲಿ ಸಕ್ಕರೆ, ಕೊಬ್ಬು, ಉಪ್ಪಿನ ಅಂಶಗಳನ್ನು ಅಧಿಕವಾಗಿ ಸೇವಿಸುವುದರಿಂದಲೂ ಹೃದಯ ಸಂಬಂಧಿ ರೋಗಗಳು ಕಾಡುತ್ತವೆ.