ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಶನಿವಾರ ಯುವಕನೊಬ್ಬ 800 ಅಡಿ ಆಳದ ಕಮರಿಗೆ ಬಿದ್ದು ಮೃತಪಟ್ಟಿದ್ದಾನೆ. ಪೊಲೀಸರು ಭಾನುವಾರ ಎನ್‌ಡಿಆರ್‌ಎಫ್ ತಂಡಗಳ ಸಹಾಯದಿಂದ ಯುವಕನ ಶವವನ್ನು ಹೊರತೆಗೆದಿದ್ದಾರೆ.
ಎಸ್‌ಐ ಸತ್ಯೇಂದ್ರ ಸಿಸೋಡಿಯಾ ಪ್ರಕಾರ ಇಲಿಯಾಸ್ ಕಾಲೋನಿ (ಖಜ್ರಾನಾ) ನಿವಾಸಿ ಮೊಯಿನ್ ಅಲಿಯಾಸ್ ಅನಾಸ್ ತನ್ನ ಸ್ನೇಹಿತರೊಂದಿಗೆ ಮುಹಾದಿ ಫಾಲ್‌ಗೆ ಪ್ರವಾಸಕ್ಕೆ ತೆರಳಿದ್ದರು. ಸೆಲ್ಫಿ ತೆಗೆಯಲು ಮುಂದಾದಾಗ ಅನಾಸ್ ಹಾಗೂ ಆತನ ಸ್ನೇಹಿತ ಇರ್ಫಾನ್ ಪೊದೆಗೆ ಬಿದ್ದಿದ್ದಾರೆ.
ಇರ್ಫಾನ್ ಪೊದೆಯಲ್ಲಿ ಸಿಕ್ಕಿಹಾಕಿಕೊಂಡು ತನ್ನ ಸ್ನೇಹಿತರ ಸಹಾಯದಿಂದ ಸುರಕ್ಷಿತವಾಗಿ ಹೊರಬಂದರೆ, ದುರದೃಷ್ಟವಶಾತ್ ಅನಾಸ್ 800 ಅಡಿ ಆಳದ ಕಮರಿಗೆ ಬಿದ್ದಿದ್ದಾನೆ.
ಶನಿವಾರ ರಾತ್ರಿಯೇ ಪೊಲೀಸರು ಅನಾಸ್‌ಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ ರಾತ್ರಿ ವೇಳೆ ಗೋಚರತೆ ಸಮಸ್ಯೆಯಿಂದಾಗಿ ಶೋಧ ಕಾರ್ಯ ನಿಲ್ಲಿಸಬೇಕಾಯಿತು.ಭಾನುವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಆರಂಭಿಸಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅನಾಸ್ ಮೃತದೇಹ ಪತ್ತೆಯಾಗಿದೆ.