
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ರಾಣಿಝರಿ ಸಮೀಪ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಬೆಟ್ಟದಿಂದ ರಾಣಿಝರಿ ಸಮೀಪ ಬೈಕ್, ಮೊಬೈಲ್, ಟೀಶರ್ಟ್, ಚಪ್ಪಲಿ, ಐಡಿ ಕಾರ್ಡ್ ಪತ್ತೆಯಾಗಿದ್ದವು. ಮೊಬೈಲ್ ಸಂಪರ್ಕಕ್ಕೆ ಪುತ್ರ ಸಿಗದಿದ್ದಾಗ ಕುಟುಂಬದವರು ಹುಡುಕಾಟ ನಡೆಸಿದ್ದರು. ಶುಕ್ರವಾರ ಬೆಂಗಳೂರಿನಿಂದ ಬಂದ ಕುಟುಂಬದವರು ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶನಿವಾರ ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸಲಾಗಿತ್ತು.
ಪೋಲಿಸ್, ಅರಣ್ಯ ಇಲಾಖೆ ಸಿಬ್ಬಂದಿ, ವಿಪತ್ತು ನಿರ್ವಹಣೆ ತಂಡ, ಸಮಾಜ ಸೇವಕ ಆರಿಫ್ ಮತ್ತು ಅವರ ಸ್ನೇಹಿತರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಡ್ರೋನ್ ಕೂಡ ಬಳಸಿ ಶೋಧ ನಡೆಸಲಾಗಿದೆ. ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಭರತ್ ಮೃತ ದೇಹ ಪತ್ತೆಯಾಗಿದೆ. ರಾಣಿಝರಿ ಸಮೀಪದ ವ್ಯೂ ಪಾಯಿಂಟ್ ನಿಂದ ಭರತ್ ಕೆಳಗೆ ಹಾರಿರುವ ಸಾಧ್ಯತೆ ಇದೆ. ವ್ಯೂ ಪಾಯಿಂಟ್ ನೇರವಾಗಿ ಪ್ರಪಾತದಲ್ಲಿ ಶವಪತ್ತೆಯಾಗಿದೆ. ಇಂಜಿನಿಯರಿಂಗ್ ಪದವೀಧರನಾಗಿದ್ದ ಭರತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಸಾವಿಗೆ ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ.