
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ತಾಲೂಕಿನ ಯುವ ಕಾಂಗ್ರೆಸ್ ಘಟಕದಿಂದ ಮೈಸೂರು ಜಿಲ್ಲೆ ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಗೋವಿಂದ ನಾಯಕ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಇದೇ ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅವರ ಹೇಳಿಕೆಯ ಬಗ್ಗೆ ಜಾಲತಾಣದಲ್ಲಿ ಹುಣಸೂರಿನ ಕಲ್ಕುಣಿಕೆಯ ನಿವಾಸಿ ಗೋವಿಂದ ನಾಯಕ ಕಮೆಂಟ್ ಮಾಡಿದ್ದ. ಅವಹೇಳನಕಾರಿ ಪದ ಬಳಸಿ ಪೋಸ್ಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಘಟಕದಿಂದ ದೂರು ದಾಖಲಿಸಲಾಗಿದೆ.