
ತನ್ನ ಹೇರ್ ಕೇರ್ ಬ್ರ್ಯಾಂಡ್ ಅನಾಮಲಿ ಪ್ರಚಾರಕ್ಕಾಗಿ ಪ್ರಿಯಾಂಕಾ ಚೋಪ್ರಾ ಮೂರು ವರ್ಷಗಳ ನಂತರ US ನಿಂದ ಭಾರತಕ್ಕೆ ಮರಳಿದ್ದಾರೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ತಾರತಮ್ಯವನ್ನು ಕೊನೆಗೊಳಿಸಲು ಯುನಿಸೆಫ್ ಕಾರ್ಯಗಳ ಪ್ರಗತಿಯನ್ನು ನೋಡಲು ಅವರು ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಿದ್ದಾರೆ. ಆದರೆ ಆಕೆಗೆ ಅಲ್ಲಿ ಅಭೂತಪೂರ್ವ ಸ್ವಾಗತದ ಬದಲು ವಿರೋಧದ ಬಿಸಿ ತಟ್ಟಿದೆ.
‘ನವಾಬರ ನಗರದಲ್ಲಿ ನಿಮಗೆ ಸ್ವಾಗತವಿಲ್ಲ’ ಎಂಬ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಪ್ರತಿಭಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಯುನಿಸೆಫ್‌ನ ಸದ್ಭಾವನಾ ರಾಯಭಾರಿಯಾಗಿದ್ದು ಅವರು ತಮ್ಮ ಕಾರ್ಯದಲ್ಲಿ ತೊಡಗಿದ್ದರು.
ಏತನ್ಮಧ್ಯೆ, ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಭೇಟಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು “ಸದ್ಯ, ನಾನು ಯುನಿಸೆಫ್‌ನೊಂದಿಗೆ ಭಾರತದ ಲಕ್ನೋದಲ್ಲಿದ್ದೇನೆ. ನಾನು ಈ ಕ್ಷೇತ್ರ ಭೇಟಿಗಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ನಾನು ನನ್ನ ಬಾಲ್ಯದ ಕೆಲವು ವರ್ಷಗಳನ್ನು ಲಕ್ನೋದ ಶಾಲೆಯಲ್ಲಿ ಕಳೆದಿದ್ದೇನೆ. ನಾನು ಇಲ್ಲಿ ಕುಟುಂಬ ಮತ್ತು ಸ್ನೇಹಿತರನ್ನು ಹೊಂದಿದ್ದೇನೆ” ಎಂದು ಹೇಳಿದ್ದಾರೆ.