ನಿಮಗೆ ಕವುಚಿ ಅಥವಾ ಬೋರಲು ಮಲಗುವ ಅಭ್ಯಾಸ ಹೆಚ್ಚಿದೆಯೇ? ಸ್ವಲ್ಪ ಹೊತ್ತು ಹೀಗೆ ಮಲಗಿದರೆ ಸಮಸ್ಯೆಯಿಲ್ಲ. ಇಡೀ ರಾತ್ರಿ ಹೀಗೆ ಮಲಗಿದರೆ ಹಲವು ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಹೊಟ್ಟೆ ಅಡಿಗೆ ಹಾಕಿ ಮಲಗುವುದರಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಕುತ್ತಿಗೆ ನೋವು ಮತ್ತು ಬೆನ್ನು ನೋವು ಹೆಚ್ಚಬಹುದು. ಹೀಗೆ ಮಲಗುವುದರಿಂದ ಕತ್ತಿನ ಭಂಗಿಯೂ ಸರಿಯಾಗಿರುವುದಿಲ್ಲ. ತಲೆಗೆ ಸರಿಯಾಗಿ ರಕ್ತ ಸಂಚಾರವೂ ನಡೆಯುವುದಿಲ್ಲ. ಹಾಗಾಗಿ ತಲೆನೋವು ಕೂಡಾ ಕಾಣಿಸಿಕೊಳ್ಳಬಹುದು.
ಹೆಚ್ಚು ಹೊತ್ತು ಹೀಗೆ ಮಲಗುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಯೂ ಉಂಟಾಗಬಹುದು. ಇದರಿಂದ ನೀವು ಸೇವಿಸಿದ ಆಹಾರ ಜೀರ್ಣವಾಗದೆ ಉಳಿಯಬಹುದು. ಅಸಿಡಿಟಿ ಸಮಸ್ಯೆ ಹೆಚ್ಚಬಹುದು. ಹೊಟ್ಟೆ ನೋವಿಗೂ ಕಾರಣವಾಗಬಹುದು.
ದಿನಕ್ಕೆ 8 ಗಂಟೆ ಉತ್ತಮ ನಿದ್ದೆ ಪಡೆಯುವುದರಿಂದ ಮಾತ್ರ ರೋಗ ರಹಿತವಾಗಿ ಬದುಕಬಹುದು. ನೀವು ಹೀಗೆ ಕವುಚಿ ಮಲಗಿದರೆ ಪದೇ ಪದೇ ನಿಮಗೆ ಎಚ್ಚರವಾಗಬಹುದು ಅಥವಾ ಗಾಢ ನಿದ್ದೆ ನಿಮ್ಮನ್ನು ಆವರಿಸದೆ ಇರಬಹುದು. ಹಾಗಾಗಿ ಸರಿಯಾದ ಭಂಗಿಯಲ್ಲಿ ಮಲಗುವುದನ್ನು ಮರೆಯದಿರಿ.