alex Certify ALERT : ‘ಡೇಟಿಂಗ್ ಆ್ಯಪ್’ ಬಳಸುವ ಯುವತಿಯರೇ ಹುಷಾರ್ : ಹೋಟೆಲ್ ಗೆ ಕರೆಸಿ ಅತ್ಯಾಚಾರ ಮಾಡಿದ ಕಿರಾತಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ‘ಡೇಟಿಂಗ್ ಆ್ಯಪ್’ ಬಳಸುವ ಯುವತಿಯರೇ ಹುಷಾರ್ : ಹೋಟೆಲ್ ಗೆ ಕರೆಸಿ ಅತ್ಯಾಚಾರ ಮಾಡಿದ ಕಿರಾತಕರು

ನವದೆಹಲಿ: ಡೇಟಿಂಗ್ ಅಪ್ಲಿಕೇಶನ್ ನಲ್ಲಿ  ಪರಿಚಯವಾದ ವ್ಯಕ್ತಿಯೋರ್ವ  ಮತ್ತು ಅವನ ಸ್ನೇಹಿತ ಹೋಟೆಲ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ದೆಹಲಿಯ ಸೆಕ್ಟರ್ 50 ಪ್ರದೇಶದಲ್ಲಿ ನಡೆದಿದೆ.

ಮಹಿಳೆಯ ದೂರಿನ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಮೂಲಕ ಆರೋಪಿಯನ್ನು ಯುವತಿ ಭೇಟಿಯಾಗಿದ್ದು, ಜೂನ್ 29 ರಂದು ಯುವತಿಯನ್ನು  ಹೋಟೆಲ್ ಗೆ ಕರೆಸಿಕೊಂಡ ಯುವಕರು ಅವಳು ಹೋಟೆಲ್ ತಲುಪಿದಾಗ, ಇಬ್ಬರು ಪುರುಷರು ಅವಳಿಗೆ ತಿನ್ನಲು ಆಹಾರ ನೀಡಿದ್ದಾರೆ. ಅದನ್ನು ಸೇವಿಸಿದ ನಂತರ ಪ್ರಜ್ಞೆ ಕಳೆದುಕೊಂಡೆ  .ನಂತರ ನನ್ನ ಮೇಲೆ ಅತ್ಯಾಚಾರ ಎಸಗಿದರು ಮತ್ತು ಕೃತ್ಯದ ವೀಡಿಯೊವನ್ನು ಸಹ ಮಾಡಿದರು. ಪ್ರಜ್ಞೆ ಮರಳಿದ ನಂತರ ನಾನು ಪ್ರತಿಭಟಿಸಿದಾಗ, ಆರೋಪಿಗಳು  ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದನು. ಹೇಗೋ ನಾನು ತಪ್ಪಿಸಿಕೊಂಡು ಮನೆಗೆ ಮರಳಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದು  ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಸೆಕ್ಟರ್ 50 ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರದ ಸೆಕ್ಷನ್ ಅಡಿಯಲ್ಲಿ ಇಬ್ಬರು ಅಪರಿಚಿತ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಸ್ಎಚ್ಒ ಪ್ರವೀಣ್ ಮಲಿಕ್ ತಿಳಿಸಿದ್ದಾರೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...