ಬೆಂಗಳೂರು: ಟೆಕ್ಕಿಗೆ ಬೆತ್ತಲೆ ವಿಡಿಯೋ ಕರೆ ಮಾಡಿದ ಯುವತಿಯೊಬ್ಬಳು ಬ್ಲ್ಯಾಕ್ಮೇಲ್ ಮಾಡಿ 2.19 ಲಕ್ಷ ರೂ. ವಂಚಿಸಿದ್ದಾಳೆ.
ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಬೆಳ್ಳಂದೂರಿನ ನಿವಾಸಿ 31 ವರ್ಷದ ನಿಶಾಂತ್ ಕಾರ್ಯನಿರ್ವಹಿಸುತ್ತಿದ್ದಾರೆ. ಡೇಟಿಂಗ್ ಆಪ್ ನಲ್ಲಿ ಡಿಸೆಂಬರ್ 21ರಂದು ಯುವತಿ ಪರಿಚಯವಾಗಿದ್ದು ವಾಟ್ಸಾಪ್ ನಂಬರ್ ಪಡೆದುಕೊಂಡ ಯುವತಿ ವಿಡಿಯೋ ಕರೆ ಮಾಡಿದ್ದಾಳೆ. ನಂತರ ಆಕೆ ಬೆತ್ತಲಾಗಿದ್ದಲ್ಲದೇ ನಿಶಾಂತ್ ಗೆ ಬೆತ್ತಲಾಗುವಂತೆ ಪ್ರಚೋದಿಸಿದ್ದಾಳೆ. ಆಕೆಯ ಮಾತಿನ ಮೋಡಿಗೆ ಬೆರಗಾದ ನಿಶಾಂತ್ ಕೂಡ ವಿವಸ್ತ್ರನಾಗಿ ಮಾತನಾಡಿದ್ದಾರೆ.
ಆತನ ಗಮನಕ್ಕೆ ಬಾರದೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಯುವತಿ ಕೆಲ ಸಮಯದ ನಂತರ ಸ್ಕ್ರೀನ್ ಶಾಟ್ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಂತವಾಗಿ ಅಪರಿಚಿತ ಯುವತಿ ನೀಡಿದ್ದ ಬ್ಯಾಂಕ್ ಖಾತೆಗೆ 2.19 ಲಕ್ಷ ರೂ. ಜಮಾ ಮಾಡಿದ್ದು, ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ನಿಶಾಂತ್ ಕಳುಹಿಸಿರಲಿಲ್ಲ. ಆತನ ಸ್ನೇಹಿತರ ಮೊಬೈಲ್ ಗೆ ವಿಡಿಯೋ ಕಳುಹಿಸಿದ ಯುವತಿ ಹಣ ನೀಡದಿದ್ದರೆ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆರಳಿಸಿದ್ದಾಳೆ. ನಂತರ ಆಪ್ತರ ಸಲಹೆ ಮೇರೆಗೆ ಸೈಬರ್ ಕ್ರೈಂ ಪೋಲಿಸ್ ಠಾಣೆಗೆ ನಿಶಾಂತ್ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.