ಕೊರೊನಾ ʼಲಾಕ್ ಡೌನ್ʼ ಸಂದರ್ಭದಲ್ಲಿ ಪ್ರೀತಿಸಿ ಮುಸ್ಲಿಂ ಯುವಕನ್ನು ಮದುವೆಯಾಗಿದ್ದ ಯುವತಿ, ಈಗ ಆತ ತನ್ನ ಮೊದಲ ಮದುವೆ ಮುಚ್ಚಿಟ್ಟು ವಂಚಿಸಿದ್ದಾನೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಾರಾಷ್ಟ್ರದ ಯುವತಿ, ಮುಸ್ಲಿಂ ಜಿಮ್ ತರಬೇತುದಾರನನ್ನು ಪ್ರೀತಿಸಿ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಿದ್ದು ಈಗ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಮಹಾರಾಷ್ಟ್ರದ ನಿವಾಸಿ ಪ್ರತಿಮಾ ನಾಂಕೂರ್ ಎಂಬ ಯುವತಿ ಜೈಪುರ ಪೊಲೀಸ್ ಕಮಿಷನರೇಟ್‌ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅವರು ಮಾರ್ಚ್ 2020 ರಲ್ಲಿ, ಲಾಕ್‌ಡೌನ್‌ಗೆ ಸ್ವಲ್ಪ ಮೊದಲು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಜೈಪುರಕ್ಕೆ ಬಂದಿದ್ದರು ಮತ್ತು ಅಲ್ಲಿ ಸಿಲುಕಿಕೊಂಡಿದ್ದರು. ಆಗ ಒಂದು ಫ್ಲಾಟ್ ಬಾಡಿಗೆಗೆ ಪಡೆದು ಜಿಮ್ ಗೆ ಸೇರಿಕೊಂಡಿದ್ದು, ಅಲ್ಲಿನ ತರಬೇತುದಾರ ಆರಿಫ್ ಇನಾಯತ್ ಜೊತೆ ಪ್ರೀತಿಗೆ ಬಿದ್ದಿದ್ದಾರೆ.
ಪ್ರೀತಿಯಿಂದ ಪ್ರೇರಿತಳಾದ ಪ್ರತಿಮಾ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಆರಿಫ್ ನನ್ನು ಮದುವೆಯಾಗಿದ್ದು, ಆದರೆ, ಅದಕ್ಕೂ ಮುನ್ನ ಆರೀಫ್, ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿಬಂದಿದೆ.
ಈ ಜೋಡಿ ಅಧಿಕೃತವಾಗಿ ಅಕ್ಟೋಬರ್ 18, 2021 ರಂದು ವಿವಾಹವಾಗಿದ್ದು, ಆರಿಫ್ ಪ್ರತಿಮಾಳನ್ನು ಮತಾಂತರಗೊಳಿಸುವಂತೆ ಒತ್ತಾಯಿಸಿದ್ದಲ್ಲದೇ ಬುರ್ಖಾ ಧರಿಸುವಂತೆ ಮಾಡಿದ್ದ ಎನ್ನಲಾಗಿದೆ.
ಆರಿಫ್ ಮುಂಬೈನಲ್ಲಿರುವ ತನ್ನ ಕುಟುಂಬದ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಲ್ಲದೇ ಹಣವನ್ನು ವಂಚಿಸಲು ಪ್ರಯತ್ನಿಸಿದ ಎಂದು ಪ್ರತಿಮಾ ಈಗ ಆರೋಪಿಸಿದ್ದಾರೆ. ಆಕೆ ಹಣ ನೀಡಲು ನಿರಾಕರಿಸಿದಾಗ ವಿಚ್ಛೇದನದ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಪ್ರತಿಮಾ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಆಕೆಯ ಎರಡೂವರೆ ವರ್ಷದ ಮಗಳೂ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಇಷ್ಟಾದರೂ ಆರಿಫ್ ಯಾವುದೇ ವೈದ್ಯಕೀಯ ಸಹಾಯ ಏರ್ಪಡಿಸಿಲ್ಲ. ಬದಲಾಗಿ, ಆರಿಫ್ ನಿಯಮಿತವಾಗಿ ಹಣಕ್ಕಾಗಿ ತನ್ನ ಮೇಲೆ ಒತ್ತಡ ಹೇರುತ್ತಿದ್ದ ಎಂದು ಪ್ರತಿಮಾ ಹೇಳಿಕೊಂಡಿದ್ದಾರೆ. ಆರಿಫ್‌ಗೆ ಈಗಾಗಲೇ ಮದುವೆಯಾಗಿದ್ದು, ಐದು ಮಕ್ಕಳಿದ್ದು, ಮದುವೆಗೂ ಮುನ್ನ ತನಗೆ ಗೊತ್ತಿರಲಿಲ್ಲ ಎಂದು ಆಕೆ ದೂರಿನಲ್ಲಿ ವಿವರಿಸಿದ್ದಾರೆ.
ವಂಚನೆಗೀಡಾದ ಯುವತಿ ಸ್ಥಳೀಯ ಶಾಸಕ ಬಾಲ ಮುಕುಂದಾಚಾರ್ಯ ಅವರನ್ನು ಸಂಪರ್ಕಿಸಿ ತನ್ನ ಸಂಪೂರ್ಣ ಕಥೆಯನ್ನು ಹೇಳಿಕೊಂಡಿದ್ದಾಳೆ. ಆರಿಫ್ ತನ್ನ ಹೆಸರನ್ನು ಬದಲಾಯಿಸದೆ ಉದ್ದೇಶಪೂರ್ವಕವಾಗಿ ಮದುವೆಯಾಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ, ಜೈಪುರ ಪೊಲೀಸ್ ಕಮಿಷನರೇಟ್‌ನ ಹೆಚ್ಚುವರಿ ಕಮಿಷನರ್ ಕುನ್ವರ್ ರಸ್ತದೀಪ್ ಅವರಿಗೆ ವರದಿಯನ್ನು ಸಲ್ಲಿಸಲಾಗಿದೆ.
ರಾಜಕೀಯ ಒತ್ತಡ ಮತ್ತು ಪ್ರಬಲ ವ್ಯಕ್ತಿಗಳ ಪ್ರಭಾವದಿಂದಾಗಿ ಪತಿ, ಶಾಸ್ತ್ರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದಂತೆ ತಡೆದಿದ್ದಾರೆ ಎಂದು ಪ್ರತಿಮಾ ಬಹಿರಂಗಪಡಿಸಿದ್ದಾರೆ. ಶಾಸಕ ಬಾಲ ಮುಕುಂದಾಚಾರ್ಯ ಮಾತನಾಡಿ, ‘ಇಂತಹ ಲವ್ ಜಿಹಾದ್ ಪ್ರಕರಣಗಳಲ್ಲಿ ಹಿಂದೂ ಮಹಿಳೆಯರು ಸಿಕ್ಕಿಬಿದ್ದು, ಅನೇಕ ಹೆಣ್ಣುಮಕ್ಕಳು ಬಲಿಪಶುಗಳಾಗುತ್ತಿದ್ದಾರೆ. ಅವರ ಪರಿಸ್ಥಿತಿ ಅತ್ಯಂತ ದುರಂತವಾಗಿ ಮಾರ್ಪಡುತ್ತಿವೆʼ ಎಂದಿದ್ದು, ಈ ದೂರಿನನ್ವಯ ಪೊಲೀಸರು ಪ್ರತಿಮಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಆಕೆಯ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ.