alex Certify ಪ್ರೀತಿಸಿದವನನ್ನು ಮದುವೆಯಾಗಲು ಭಾರತಕ್ಕೆ ಬಂದ ಫ್ರೆಂಚ್‌ ಯುವತಿ..! ಹಿಂದೂ ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿದವನನ್ನು ಮದುವೆಯಾಗಲು ಭಾರತಕ್ಕೆ ಬಂದ ಫ್ರೆಂಚ್‌ ಯುವತಿ..! ಹಿಂದೂ ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜೋಡಿ

ಫ್ರೆಂಚ್​ ಯುವತಿ ಹಾಗೂ ದೇಶಿ ಹುಡುಗ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆ ಸಮಾರಂಭದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ.

ಪ್ಯಾರಿಸ್​ ನಿವಾಸಿಯಾದ ಮೇರಿ ಲೋರಿ ಹರ್ಲ್​ ಎಂಬವರು ತಮ್ಮ ಗೆಳೆಯ ರಾಕೇಶ್​ರನ್ನು ವಿವಾಹವಾಗಲು ಬಿಹಾರದ ಬೇಗುಸರಾಯ್​​ಗೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ.

ಇವರಿಬ್ಬರು ಆರು ವರ್ಷಗಳ ಹಿಂದೆ ಮೊದಲ ಬಾರಿಗೆ ದೆಹಲಿಯಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಆ ಸಮಯದಲ್ಲಿ ಕುಮಾರ್​​ ಗೈಡ್​ ಆಗಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.

ಮೇರಿ ಕೆಲ ಸಮಯದ ಬಳಿಕ ಫ್ರಾನ್ಸ್​ಗೆ ಮರಳಿದ್ರು. ಮೂರು ವರ್ಷಗಳ ಹಿಂದೆ ರಾಕೇಶ್​ ಕೂಡ ಫ್ರಾನ್ಸ್​​ಗೆ ತೆರಳಿದ್ರು. ಇಬ್ಬರೂ ಸೇರಿ ಫ್ರಾನ್ಸ್​ನಲ್ಲಿ ಟೆಕ್ಸ್​ಟೈಲ್ಸ್​ ಉದ್ಯಮ ಆರಂಭಿಸಿದ್ರು ಎಂದು ರಾಕೇಶ್​ ತಂದೆ ರಾಮಚಂದ್ರ ಹೇಳಿದ್ರು.

ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದ ಮೇರಿ, ರಾಕೇಶ್​ ತವರಿನಲ್ಲಿ ಮದುವೆ ಆಗಲು ನಿರ್ಧರಿಸಿದ್ದರು. ಇದಕ್ಕೆ ಮೇರಿ ಪೋಷಕರೂ ಸಹ ಸಮ್ಮತಿ ಸೂಚಿಸಿದ್ದರು.

ಭಾನುವಾರ ಈ ಜೋಡಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಅಂತರ್​ ಜನಾಂಗೀಯ ವಿವಾಹಕ್ಕೆ ಗ್ರಾಮಸ್ಥರು ಮಾತ್ರವಲ್ಲದೇ ಅಕ್ಕ ಪಕ್ಕದ ಗ್ರಾಮದವರೂ ಸೇರಿ ಜನಸಾಗರವೇ ಹರಿದು ಬಂದಿದೆ. ಸೋಶಿಯಲ್​ ಮೀಡಿಯೋದಲ್ಲಿಯೂ ಇವರ ಮದುವೆ ಫೋಟೋಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...