
ತಮಿಳು ಚಿತ್ರರಂಗದ ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಓಮಂದೂರರ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೇಡಗು, ರಾಕಥಾನ್ ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡುವ ಮೂಲಕ ಹೆಸರಾಂತ ಸಂಗೀತ ನಿರ್ದೇಶಕರ ಮೆಚ್ಚುಗೆ ಪಾತ್ರರಾಗಿದ್ದ ಪ್ರವೀಣ್ ಕುಮಾರ್ ಯಶಸ್ಸಿನ ಹಾದಿಯಲ್ಲಿರುವಾಗಲೇ ಸಾವಿಗೀಡಾಗಿರುವುದು ಅವರ ಅಭಿಮಾನಿಗಳಿಗೆ ನೋವು ತಂದಿದೆ.
ಪ್ರವೀಣ್ ಕುಮಾರ್ ಅವರಿಗೆ ತಮಿಳು ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಅರಸಿಕೊಂಡು ಬಂದಿದ್ದರೂ ಸಹ ಅನಾರೋಗ್ಯದ ಕಾರಣಕ್ಕೆ ಅವರು ಮೊದಲಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.