alex Certify 21 ನೇ ವಯಸ್ಸಿನಲ್ಲೇ ನಾಲ್ಕನೇ ಮಗುವಿಗೆ ತಾಯಿಯಾಗ್ತಿದ್ದಾಳೆ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

21 ನೇ ವಯಸ್ಸಿನಲ್ಲೇ ನಾಲ್ಕನೇ ಮಗುವಿಗೆ ತಾಯಿಯಾಗ್ತಿದ್ದಾಳೆ ಯುವತಿ..!

ತಾಯಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಇದನ್ನು ಪುನರ್ಜನ್ಮ ಎನ್ನಲಾಗುತ್ತದೆ. ಮಗು ಹೊಟ್ಟೆಯಲ್ಲಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ, ಈ ಖುಷಿ ವಿಷ್ಯವನ್ನು ಹಂಚಿಕೊಳ್ಳಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಗರ್ಭ ಧರಿಸಿದ ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಯುವತಿಯೊಬ್ಬಳಿಗೆ ದುಬಾರಿಯಾಗಿದೆ.

ಅಮೆರಿಕಾದ ಕ್ರಿಸ್ಟಾ ವಯಸ್ಸು ಕೇವಲ 21 ವರ್ಷ. ಇದುವರೆಗೆ 3 ಮಕ್ಕಳ ತಾಯಿ ಆಗಿರುವ ಕ್ರಿಸ್ಟಾ, ನಾಲ್ಕನೇ ಬಾರಿ ತಾಯಿಯಾಗ್ತಿದ್ದಾಳೆ. ಟಿಕ್‌ಟಾಕ್ ಮೂಲಕ ಈ ವಿಷಯವನ್ನು ಎಲ್ಲರ ಮುಂದಿಟ್ಟಿದ್ದಾಳೆ.

ಆಕೆ ವಿಷ್ಯ ಕೇಳಿ ಖುಷಿಯಾಗುವ ಬದಲು ಜನರು ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕ್ರಿಸ್ಟಾ, ಮೂರು ಮಕ್ಕಳ ಜೊತೆ ಅನೇಕ ಫೋಟೋ, ವಿಡಿಯೋ ಹಂಚಿಕೊಳ್ತಾಳೆ. ಎರಡು ಹೆಣ್ಣು, ಎರಡು ಗಂಡು ಮಗು ಬೇಕೆಂದು ಬಯಸಿದ್ದ ಕ್ರಿಸ್ಟಾಗೆ ಈಗ ಮೂರು ಹೆಣ್ಣು ಮಕ್ಕಳು. ಬೇಬಿ ಬಂಪ್ ವಿಡಿಯೋ ಹಾಕಿರುವ ಕ್ರಿಸ್ಟಾಗೆ ಜನರು ಚಿತ್ರ-ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಸ್ಟಾ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಪಡೆದು, ನಂತ್ರ ಆರಾಮವಾಗಿರಬೇಕೆಂಬುದು ಆಕೆ ಆಸೆಯಂತೆ. ಹಾಗಾಗಿ 21ನೇ ವಯಸ್ಸಿನಲ್ಲೇ 4 ಮಕ್ಕಳನ್ನು ಪಡೆಯುತ್ತಿದ್ದೇನೆ ಎನ್ನುತ್ತಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...