
ಇತ್ತೀಚಿಗಷ್ಟೇ ತನ್ನ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದ ಮುತ್ತುರಾಜ್ ನಿರ್ದೇಶನದ ‘ಯಂಗ್ ಮ್ಯಾನ್’ ಚಿತ್ರ, ಮುಂದಿನ ತಿಂಗಳು ಜೂನ್ 14ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು ಪಾರಿ ಮೂವಿ ಮೇಕರ್ಸ್ ಲಾಂಛನದಲ್ಲಿ ಹರೀಶ್, ವಿಜಯಲಕ್ಷ್ಮಿ ರಾಮೇಗೌಡ ಮತ್ತು ಸಮಯ ಈಶ್ವರಪ್ಪ ನಿರ್ಮಾಣ ಮಾಡಿದ್ದು, ಯಶ್ವಂತ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ನಯನ ಪುಟ್ಟಸ್ವಾಮಿ, ಜಯರಾಮ್, ಸುನಿಲ್ ಗೌಡ, ರಶಿಕ ಕರಾವಳಿ, ಮತ್ತು ಆನಂದ್ ಕೆಂಗೇರಿ ತಾರಾ ಬಳಗದಲ್ಲಿದ್ದಾರೆ. ಲೋಕಿಲ್ ತವಸ್ಯ ಸಂಗೀತ ಸಂಯೋಜನೆ ನೀಡಿದ್ದು, ಚಾಮರಾಜ ಶಾಮ್ ನಾಜ್ ಶ ನೃತ್ಯ ನಿರ್ದೇಶನವಿದೆ.
